Advertisement

ಐದು ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ 

12:43 PM Jun 14, 2017 | |

ವಿಧಾನಸಭೆ: ರಾಜ್ಯದಲ್ಲಿ ಕೈಗಾರಿಕೆಗಳು ಸೇರಿದಂತೆ ಉದ್ಯಮದಾರರ ಬೇಡಿಕೆಗೆ ತಕ್ಕಂತೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಒದಗಿಸಲು ಪ್ರಸಕ್ತ ವರ್ಷ 5 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಬಿ.ಎ.ಬಾವಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗುವುದು. ಅದರ ಉಸ್ತುವಾರಿ ನಾನೇ ವಹಿಸುತ್ತೇನೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ 7,8, 9 ನೇ ತರಗತಿ ವ್ಯಾಸಂಗ ಮಾಡಿರುವವರಿಗೆ ಮೊದಲ ಹಂತದಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು.

15 ದಿನಗಳಿಂದ 6 ತಿಂಗಳವರೆಗೆ ತರಬೇತಿ ನೀಡಿ ಪ್ರೋತ್ಸಾಹ ಧನ ಸಹ ನೀಡಲಾಗುವುದು,’ಎಂದು ತಿಳಿಸಿದರು. “ತರಬೇತಿ ಕಾರ್ಯಕ್ರಮಕ್ಕೆ 6 ಲಕ್ಷ ಅರ್ಜಿಗಳು ಬಂದಿವೆ. ಉತ್ತಮ ಸ್ಪಂದನೆ ದೊರೆತಿದೆ. ತರಬೇತಿ ನೀಡಲು  ಕೇಂದ್ರ ಸರ್ಕಾರದ 160 ಕೋಟಿ ರೂ. ನೆರವಿನ ಜತೆಗೆ ರಾಜ್ಯ ಸರ್ಕಾರದಿಂದ 1330 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ,’ ಎಂದು ಹೇಳಿದರು.

ಕುಲ ಕಸುಬೇ ಮಾಡಬೇಕಾ?: ಬಿಜೆಪಿಯ ಗೋವಿಂದ ಕಾರಜೋಳ, “ಗ್ರಾಮೀಣ ಭಾಗದಲ್ಲಿ ಕುಲಕಸುಬುಗಳು ಮರೆಯಾಗುತ್ತಿವೆ. ಅಂತವರಿಗೆ ಕೌಶಲ್ಯ ತರಬೇತಿ ನೀಡುವಾಗ ಹೆಚ್ಚಿನ ಆದ್ಯತೆ ನೀಡಿ,’ ಎಂದು ಸಲಹೆ ನೀಡಿದರು.

ಅದಕ್ಕೆ ಸಿದ್ದರಾಮಯ್ಯ ಅವರು, “ಕಾರಜೋಳ್‌ ಅವರೇ ಕುಲಕಸುಬು ಯಾರೂ ಮಾಡುತ್ತಿಲ್ಲ. ತಲೆಮಾರುಗಳಿಂದ ಮಾಡುವ ಕಸುಬೇ ಈಗಲೂ ಮುಂದುವರಿಸಬೇಕಾ? ಶಿಕ್ಷಣ ಹಾಗೂ ಉತ್ತಮ ಕೌಶಲ್ಯ ತರಬೇತಿ ಪಡೆದು ಮೇಲಿನ ಹಂತದ ಉದ್ಯೋಗಕ್ಕೆ ಹೋಗಲಿ ಬಿಡಿ,’ ಎಂದರು.

Advertisement

“ಚಮ್ಮಾರಿಕೆ ಮಾಡೋರು ಅದೇ ಮಾಡಬೇಕು, ಕುಂಬಾರಿಕೆ ಮಾಡೋರು ಅದೇ ಮಾಡಬೇಕು ಎಂಬ ಭಾವನೆ ಬೇಡ. ಅದರಿಂದಲೇ ಜಾತಿ ವ್ಯವಸ್ಥೆ ಜಾಸ್ತಿ. ಇವನಾರವ ಇವನಾರವ ಎನ್ನದಿರಯ್ಯ , ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂಬ ಬಸವಣ್ಣನವರ ವಚನ ಹೇಳುತ್ತಲೇ ನಿಮ್ಮ ಜಾತಿ ಯಾವುದು ಎಂದು ಕೇಳುವ ಸ್ಥಿತಿ ಈಗಲೂ ಇದೆ,’ ಎಂದು ಹೇಳಿದರು.

ಹುಡ್ಗಿàರು ಮಾಡೋ ಹೇರ್‌ಕಟ್‌ಗೆ ದುಡ್ಡು ಜಾಸ್ತಿ: ಕೌಶಲ್ಯ ತರಬೇತಿ ಪ್ರಸ್ತಾಪದ ಸಂದರ್ಭದಲ್ಲಿ ಹೇರ್‌ಕಟ್‌ ವಿಚಾರದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ “ದೆಹಲಿಯಲ್ಲಿ ಹತ್ತು ವರ್ಷದ ಹಿಂದೆ ಪಂಚತಾರಾ ಹೋಟೆಲ್‌ಗೆ ನಾನು ಹೇರ್‌ಕಟ್‌ ಮಾಡಿಸಿಕೊಳ್ಳಲು ಹೋದಾಗ 200 ರೂ. ಪಡೆದರು. ನಮ್ಮ ಊರಲ್ಲಿ ಆಗ ತುಂಬಾ ಕಡಿಮೆ ಕೊಡುತ್ತಿದ್ದೆ.  ಅಷ್ಟು ದರ ನೋಡಿ ಆಗಲೇ ಅಚ್ಚರಿಗೊಂಡಿದ್ದೆ,’ ಎಂದರು.

ಆಗ ಬಿಜೆಪಿಯ ಸಿ.ಟಿ.ರವಿ, “ಈಗ ಇನ್ನೂ ಜಾಸ್ತಿ ತಗೋತಾರೆ, ಎಂ.ಬಿ.ಪಾಟೀಲ್‌ ಅಥವಾ ಜಾರ್ಜ್‌ ಅವರನ್ನು ಕೇಳಿ,’ ಎಂದು ಚಟಾಕಿ ಹಾರಿಸಿಸದರು. ಅದಕ್ಕೆ ಕಾಂಗ್ರೆಸ್‌ನ ಕೆ.ಎನ್‌.ರಾಜಣ್ಣ, “ಸಾರ್‌,  ಈಗ ಸ್ಟಾರ್‌ ಹೋಟೆಲ್‌ಗ‌ಳಲ್ಲಿ ಹುಡುಗೀರು ಕಟಿಂಗ್‌ ಮಾಡಿದರೆ ಜಾಸ್ತಿ ದುಡ್ಡು, ಹುಡುಗರು ಮಾಡಿದರೆ ಕಡಿಮೆ ದುಡ್ಡು ಸಾರ್‌,’ ಎಂದು ಹೇಳಿದಾಗ ಸದನದಲ್ಲಿ ನಗೆ ಅಲೆ.

Advertisement

Udayavani is now on Telegram. Click here to join our channel and stay updated with the latest news.

Next