Advertisement

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

11:13 PM May 16, 2024 | Team Udayavani |

ಬೆಳಗಾವಿ: ದ್ವಿಚಕ್ರ ವಾಹನದ ಮೇಲೆ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ ಯುವಕನನ್ನು ಯುವತಿಯ ಸಹೋದರ ಸೂð ಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಇಲ್ಲಿನ ಮಹಾಂತೇಶ ನಗರದ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಕನಕದಾಸ ವೃತ್ತದಲ್ಲಿ ಗುರುವಾರ ನಡೆದಿದೆ.

Advertisement

ಗಾಂ ಧಿ ನಗರದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಯುವಕ ಇಬ್ರಾಹಿಂ ಗೌಸ್‌(22) ಕೊಲೆಗೀಡಾಗಿದ್ದು, ಇದೇ ಪರಿಸರದ ಬೈಕ್‌ ಮೆಕ್ಯಾನಿಕ್‌ ಮುಜಮಿಲ್‌ ಸತ್ತಿಗೇರಿ (23) ಆರೋಪಿ. ಈತನನ್ನು ಪೊಲೀಸರು  ಬಂಧಿ ಸಿದ್ದಾರೆ. ಇಬ್ರಾಹಿಂ ಗೌಸ್‌ ಹಾಗೂ ಮುಜಮ್ಮಿಲ್‌ನ ಸಹೋದರಿ ಕೆಲವು ವರ್ಷಗಳಿಂದ  ಪ್ರೀತಿಸುತ್ತಿದ್ದರು. ವಿವಾಹ ಮಾಡಿಕೊಡುವಂತೆ ಯುವಕನ ಕಡೆಯವರು ಯುವತಿ ಮನೆಯವರ ಜತೆ ಮಾತುಕತೆ ನಡೆಸಿದ್ದರು.

ಆದರೆ ಮದುವೆಗೆ ಯುವತಿ ಮನೆಯವರು ನಿರಾಕರಿಸಿದ್ದರು. ಪ್ರೀತಿ-ಪ್ರೇಮ ಬಿಟ್ಟು ದೂರ ಇರುವಂತೆ ಇಬ್ಬರಿಗೂ ತಾಕೀತು ಮಾಡಿದ್ದರು. ಆದರೆ ಯುವಕ-ಯುವತಿ ಇಬ್ಬರೂ ಕದ್ದು ಮುಚ್ಚಿ ಪ್ರೀತಿಸುತ್ತಿರುವುದು ಯುವತಿಯ ಸಹೋದರ ಮುಜಮ್ಮಿಲ್‌ಗೆ ಗೊತ್ತಿತ್ತು. ಇಬ್ರಾಹಿಂ ಗೌಸ್‌ ಯುವತಿಯನ್ನು ಕರೆದುಕೊಂಡು ಗುರುವಾರ ಬೈಕ್‌ ಮೇಲೆ ತೆರಳುತ್ತಿದ್ದ. ಇದನ್ನು ಗಮನಿಸಿದ ಮುಜಮ್ಮಿಲ್‌ ಬೈಕ್‌ ನಿಲ್ಲಿಸಿ ತಕರಾರು ತೆಗೆದಿದ್ದಾನೆ.

ಸಹೋದರಿಯನ್ನು ಮನೆಗೆ ಬರುವಂತೆ ಹೇಳಿದ್ದಾನೆ. ಆದರೆ ಇದಕ್ಕೆ ಯುವತಿ ಒಪ್ಪಿಲ್ಲ. ಆಗ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಮುಜಮ್ಮಿಲ್‌ ತನ್ನಲ್ಲಿದ್ದ ಸೂðಡ್ರೈವರ್‌ನಿಂದ ಇಬ್ರಾಹಿಂನ ಹೊಟ್ಟೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವಕನನ್ನು  ಸಂಚಾರ ಠಾಣೆ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಜೀವ ಉಳಿಸಲಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next