Advertisement

ಜಗತ್ತಿನಲ್ಲಿ ಕೌಶಲ್ಯತೆಗಿದೆ ಬೆಲೆ

03:15 PM Apr 29, 2022 | Team Udayavani |

ಬೀದರ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ್ಯತೆ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲತೆಗೆ ಎಲ್ಲಿಲ್ಲದ ಬೆಲೆ ಇದೆ ಎಂದು ಶಾಸಕ ರಹೀಮ್‌ ಖಾನ್‌ ನುಡಿದರು.

Advertisement

ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀದರ ಐಟಿಐ ಕೈಗೆ ಕೆಲಸ ಕೊಡುವ ಸಂಸ್ಥೆ. ಅನೇಕ ಮಕ್ಕಳಿಗೆ ಗುಣಾತ್ಮಕ ತರಬೇತಿ ಜೊತೆಗೆ ನಿರಂತರ ಕ್ಯಾಂಪಸ್‌ ಆಯೋಜನೆಯಿಂದ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ನಗರದ ಸರ್ಕಾರಿ ಐಟಿಐ ವಿವಿಧ ವೃತ್ತಿಯ 425 ತರಬೇತಿದಾರರಿಗೆ 8 ಕಂಪನಿಗಳಲ್ಲಿ ಆಯ್ಕೆಗೆ ಅನುವು ಮಾಡಿದೆ. ಜೊತೆಗೆ ಮಕ್ಕಳಿಗೆ ಅಂಕಪಟ್ಟಿಯ ಹುಸಿ ಭರವಸೆ ನೀಡದೆ. ಅವರೆಲ್ಲರಿಗೆ ಉದ್ಯೋಗ ಎಂಬ ಅಕ್ಷಯ ಪಾತ್ರೆ ಕೈಗೆ ನೀಡುವ ಕಾರ್ಯ ಸ್ಮರಣೀಯ ಎಂದು ಹೇಳಿದರು.

ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿ, ಕೈಗಾರಿಕೆಗಳಿಂದ ಜಿಲ್ಲೆಯಲ್ಲಿ ಎಲ್ಲರಿಗೆ ಕನಿಷ್ಟ ಕೌಶಲತೆಯ ಜ್ಞಾನಕ್ಕೆ ವೇದಿಕೆ ನಿರ್ಮಿಸಿ ಸಹಕರಿಸಲು ಕೆಲಸ ಮಾಡಲಾಗುತ್ತಿದೆ. ಇಂದು ಬಿಇಎಲ್‌ ಕೈಗಾರಿಕೆಗೆ 43, ಮಹೀಂದ್ರ ಮತ್ತು ಮಹೀಂದ್ರಗೆ 56, ಆಟೋ ಕ್ಲಸ್ಟರ್‌ಗೆ 20, ಜಿಯೊಡೆಸಿಕಗೆ 11, ಜಿಂದಾಲಗೆ 50, ಶಕ್ತಿ ಹರಮ್ಯಾನಗೆ 12, ಸ್ವಿಚ್ಯ ಘೇರ ಕಾರ್ಖಾನೆಗೆ 30, ರಾಣೆ ಇಂಡಸ್ಟ್ರೀಜ್‌ಗೆ 87 ಸೇರಿ ಒಟ್ಟು 309 ತರಬೇತಿದಾರರು ಆಯ್ಕೆಯಾಗಿದ್ದು, ಉಳಿದ 422 ತರಬೇತಿದಾರರು ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕಿರಿಯ ತರಬೇತಿ ಅಧಿಕಾರಿ ಬಾಬು ಪ್ರಭಾಜಿ ಅವರನು ಸನ್ಮಾನಿಸಲಾಯಿತು. ಯೂಸುಫ್‌ ಮಿಯ್ಯ ಜೋಜನಾ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ಆಡಳಿತ ಅಧಿಕಾರಿ ಪ್ರಕಾಶ ಜನವಾಡಕರ ವಂದಿಸಿದರು.

Advertisement

ವಿವಿಧ ಸಂಸ್ಥೆಗಳ ಪ್ರಾಚಾರ್ಯರಾದ ಬಾಬು ರಾಜೋಳಕರ, ಲಕ್ಷ್ಮೀಕಾಂತ ಶಂಕರರಾವ್‌, ಯರಗಲ ತಾಜೋದ್ದಿನ್‌, ಯಾವಳೆ ಸುಭಾಷ, ವಿಶ್ವನಾಥ ಬಿರಾದರ, ಶಿವಕುಮಾರ ಪಾಟೀಲ, ವೀರೇಶ್‌ ಪಾಟೀಲ, ಜ್ಞಾನರಡ್ಡಿ ಹಾಗೂ ಸಂಗಪ್ಪ ಹುಲಸೂರೆ, ರಾಜಕುಮಾರ ಮಾಳಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next