Advertisement

ರೈತ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ

03:01 PM Oct 23, 2022 | Team Udayavani |

ಮಾಗಡಿ: ಕೃಷಿ ಜೀವನೋಪಾಯ ಚಟು ವಟಿಕೆಗಳಲ್ಲಿ ಮಹಿಳೆಯರು ಕೌಶಲ್ಯತೆ ಪಡೆದು, ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಹಾಗೂ ಹಿರಿಯ ವಿಜ್ಞಾನಿ ಲತಾ ಆರ್‌.ಕುಲಕರ್ಣಿ ತಿಳಿಸಿದರು.

Advertisement

ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳೆಯರಿಗೆ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಫ‌ಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕೃಷಿ ಚಟುವಟಿಕೆಯಲ್ಲಿ ವಿವಿಧ ಬಗೆಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗು ವಂತೆ ಪ್ರತಿ ಗ್ರಾಪಂಗೆ ಒಬ್ಬರಂತೆ ಆಯ್ಕೆಯಾದ 30 ಕೃಷಿ ಸಖೀಯರಿಗೆ ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೃಷಿ ವಿಶ್ವವಿದ್ಯಾನಿಲಯದಿಂದ ಆರು ದಿನದ ಪರಿಸರ, ಕೃಷಿ ವಿಧಾನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದ್ದು, ಇದರ ಸದ್ಬಳಕೆಯಿಂದ ಸಮಾಜದಲ್ಲಿ ಸ್ವಾವಲಂಬನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಾಗಡಿ ವಲಯ ಅರಣ್ಯಾಧಿಕಾರಿ ಮಂಜುನಾಥ್‌, ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಸಖೀಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. 6 ದಿನಗಳ ತರಬೇತಿಯಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ.ಲತಾ ಆರ್‌.ಕುಲಕರ್ಣಿ (ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು) ಪೌಷ್ಟಿಕ ಆಹಾರ, ಅಪೌಷ್ಟಿಕತೆಯ ಲಕ್ಷಣಗಳು ಮತ್ತು ನಿರ್ವಹಣೆ, ಡಾ.ಸೌಜನ್ಯ, ಎಸ್‌.ವಿಜ್ಞಾನಿ (ಕೃಷಿ ವಿಸ್ತರಣೆ) ಕೃಷಿ ಸಖೀ, ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ಜೀವನೋಪಾಯದ ದೃಷ್ಟಿಕೋನ, ಸಂವಹನದ ಕೌಶಲ್ಯಗಳು, ಕು.ಶಾಂತ ಬಾಲಗೊಂಡ ವಿಷಯ ತಜ್ಞರು(ಹವಾಮಾನ ಶಾಸ್ತ್ರ) ಪರಿಸರ ಕೃಷಿ ವಿಧಾನ, ಡಾ.ದೀಪಾ ಪೂಜಾರ ವಿಜ್ಞಾನಿ(ತೋಟಗಾರಿಕೆ) ಕೃಷಿ ಪೌಷ್ಟಿಕ ಕೈತೋಟ, ಉಮಾ (ಕ್ಷೇತ್ರ ವ್ಯವಸ್ಥಾಪಕರು) ಬೀಜ, ಬೀಜೋಪಚಾರ, ಉತ್ತಮ ಗುಣ್ಣಮಟ್ಟದ ಬೀಜಗಳ ಆಯ್ಕೆ, ಬೀಜೋಪಚಾರ ಮತ್ತು ಬೀಜಾಮೃತದ ತಯಾರಿಕೆ, ಡಾ.ದಿನೇಶ್‌, ಎಂ.ಎಸ್‌. ವಿಜ್ಞಾನಿ (ಬೇಸಾಯಶಾಸ್ತ್ರ) ಬೇಸಾಯ ಕ್ರಮ, ಮಾಗಿ ಉಳುಮೆ, ಬದುವಿನ ನಿರ್ಮಾಣ, ನೀರು ನಿರ್ವಹಣೆ ಅಭ್ಯಾಸಗಳು, ಕೃಷಿ ಪದ್ಧತಿಗಳು, ಪ್ರೀತು, ಡಿ.ಸಿ.ವಿಜಾnನಿ(ಮಣ್ಣುಶಾಸ್ತ್ರ) ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆ, ಗಿಡಗಳ ಬೆಳವಣಿಗೆಗೆ ಅವಶ್ಯಕವಿರುವ ಪೋಷಕಾಂಶಗಳು, ಡಾ. ರಾಜೇಂದ್ರ ಪ್ರಸಾದ್‌, ಬಿ.ಎಸ್‌. ವಿಜ್ಞಾನಿ (ಸಸ್ಯ ಸಂರಕ್ಷಣೆ) ಕೀಟ ಮತ್ತು ರೋಗಗಳ ನಿರ್ವಹಣೆ, ಕೀಟನಾಶಕಗಳು, ಕೀಟಗಳ ಗುರುತಿಸುವಿಕೆ ಮತ್ತು ಬೋಡೋì ಮಿಶ್ರಣ ತಯಾರಿಕೆ, ವಿವಿಧ ಬಲೆಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next