Advertisement

ಶಿಕ್ಷಕರಿಗೆ ಕೌಶಲಾಭಿವೃದ್ಧಿ : ಮಾಹಿತಿ

09:00 AM Jul 27, 2017 | Team Udayavani |

ಬೆಳ್ತಂಗಡಿ: ಕಪುಚಿನ್‌ ಕೃಷಿಕ ಸೇವಾ ಕೇಂದ್ರ ದಯಾಳ್‌ಬಾಗ್‌ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ಲಾಯಿಲ ಇದರ ವತಿಯಿಂದ ಓದುವ ಮತ್ತು ಗಣಿತದ ಕೌಶಲಾಭಿವೃದ್ಧಿ ಬಗ್ಗೆ ಶಿಕ್ಷಕರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕ ಫಾ| ವಿನೋದ್‌ ಮಸ್ಕರೇನ್ಹಸ್‌ ಮಾತನಾಡಿ, ಮಕ್ಕಳು ಮೆಚ್ಚುವ ಶಿಕ್ಷಕರು ನಾವಾಗಿರಬೇಕು. ಕಲಿಕೆಯಲ್ಲಿ ಅಸಕ್ತಿ ತೋರದ ಮಕ್ಕಳನ್ನು ಪ್ರೀತಿಯಿಂದ ಅವರ ಜತೆ ಕುಳಿತು ವಿದ್ಯೆ ನೀಡುವುದು ಶಿಕ್ಷಕರಾದವರ ಕರ್ತವ್ಯ ಎಂದವರು ತಿಳಿಸಿದರು.

Advertisement

ಸಂಸ್ಥೆಯ ಸಹ ನಿರ್ದೇಶಕ ಫಾ| ರೋಹನ್‌ ಲೋಬೊ ಅವರು ಈ ವರ್ಷದಲ್ಲಿ ನಡೆಯಬೇಕಾದ ಚಟುವಟಿಕೆಗಳ ಕುರಿತು, ಮಕ್ಕಳ ಮಾಸಿಕ ಅರ್ಧ ವಾರ್ಷಿಕ ಮತ್ತು ವಾರ್ಷಿಕ ಮೌಲ್ಯಮಾಪನ ಮುಂತಾದವುಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಿದರು. ಬೆಳ್ತಂಗಡಿ ತಾಲೂಕಿನ 25 ಶಾಲಾ ಶಿಕ್ಷಕರಿಗೆ ಈ ತರಬೇತಿಯನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next