Advertisement

Education: ಉದ್ಯಮಿಗಳ ಜತೆಗೂಡಿ ಕೌಶಲಾಧಾರಿತ ಪಠ್ಯಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

10:58 PM Nov 30, 2023 | Team Udayavani |

ಬೆಂಗಳೂರು: ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಹೊಸದಾಗಿ ಆವಿಷ್ಕಾರ ಮಾಡಿದ 13 ಉತ್ಪನ್ನಗಳನ್ನು ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ಅವರು ಅನಾವರಣಗೊಳಿಸಿದರು.

Advertisement

ಸ್ಕಲ್‌ಮೇಟ್‌, ಆ್ಯನಿಮೇಷನ್‌ ವೀಡಿಯೋ, ಬಯೋ ಟ್ರ್ಯಾಪ್ಟರ್‌, ಆಕ್ಸಿಜನ್‌ ಜನರೇಟರ್‌, ಒಳಾಂಗಣ ಗಾಳಿ ಗುಣಮಟ್ಟ ಉತ್ತೇಜಿಸುವ ಯಂತ್ರ, ಹೈಸ್ಪೀಡ್‌ ಎಡಿಸಿ ಬೋರ್ಡ್‌ ಮುಂತಾದ ವಿನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ| ಎಂ.ಸಿ. ಸುಧಾಕರ್‌, ಬೋಧನೆ ಆಧಾರಿತ ಕಲಿಕೆಗಿಂತ ಕೌಶಲ ಆಧಾರಿತ ಪಠ್ಯಕ್ರಮ ಇಂದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿಗಳ ಜತೆಗೂಡಿ ಕೌಶಲ ಆಧಾರಿತ ಪಠ್ಯಕ್ರಮ ಸಿದ್ಧಪಡಿಸುವ ಹಾದಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ಸರ್ಟಿಫಿಕೇಟ್‌ ಕೋರ್ಸ್‌ ಚಿಂತನೆ
ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮಂತ್ರಿ ಹಾಗೂ ಕೌಶಲಾಭಿವೃದ್ಧಿ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲಗಳನ್ನು ಯುವಜನತೆಗೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಉದ್ಯಮಗಳ ಅಗತ್ಯಗಳಿಗೆ ಪೂರಕವಾಗಿ 6ರಿಂದ 8 ವಾರಗಳ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಪ್ರಾರಂಭಿಸುವ ಚಿಂತನೆಯೂ ಇದೆ. ಇದರಿಂದ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾದ ಮಾನವ ಸಂಪನ್ಮೂಲ ಸಿದ್ಧಪಡಿಸಲಾಗುವುದು. ಆ ಮೂಲಕ ಉದ್ಯೋಗ ಪಡೆದವರು ಗೌರವಯುತ ಬದುಕು ನಡೆಸಲು ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next