Advertisement
ಫೋಟೋಗಳ ಕಲಾತ್ಮಕತೆ ಉತ್ತುಂಗಕ್ಕೇರಿ ನಿಂತ ಸಮಯದಲ್ಲಿ ಅದಕ್ಕಿಂತ ಭಿನ್ನವಾಗಿ ಚಿತ್ರಗಳನ್ನು ಹೇಗೆ ಸೆರೆಹಿಡಿಯಬಹುದೆಂಬ ಆಲೋಚನೆ ಉಂಟಾಯಿತು. ಅದರ ಪ್ರತಿಫಲವೇ ಸ್ಕೆಚ್ ಆರ್ಟ್. ಮೊದ ಮೊದಲು ಕೇವಲ ಪೆನ್ಸಿಲ್‌ನ ತುದಿಯಲ್ಲಿ ತಯಾರಾಗುತ್ತಿದ್ದ ಸ್ಕೆಚ್ ಆರ್ಟ್‌ನಲ್ಲಿ ಅನಂತರದಲ್ಲಿ ಭಿನ್ನ ಭಿನ್ನ ಆವಿಷ್ಕಾರಗಳು ಬಂದವು. ಗ್ರಾಫಿಕ್ ಡಿಸೈನ್ ಅದರ ಮುಂದುವರಿದ ರೂಪ. ಪೆನ್ಸಿಲ್, ಬಣ್ಣದ ಪೆನ್ಸಿಲ್, ಚಾರ್ಕೋಲ್, ರಬ್ಬರ್ ಮೊದಲಾದ ಉಪಕರಣಗಳು ಸ್ಕೆಚ್‌ಆರ್ಟ್‌ನಲ್ಲಿ ಬಳಸಲ್ಪಡುತ್ತದೆ. ಶೇಡಿಂಗ್ ಇಲ್ಲಿ ಹೆಚ್ಚು ಪರಿಣಾಮಕಾರಿ.
ಒಬ್ಬ ಸ್ಕೆಚ್ ಆರ್ಟಿಸ್ಟ್ ಆಗಲು ಮುಖ್ಯವಾಗಿ ಬೇಕಾಗಿರುವುದು ಹವ್ಯಾಸ ಮತ್ತು ಆಸಕ್ತಿ. ಯಾವುದೇ ಡಿಗ್ರಿ ಕ್ವಾಲಿಫಿಕೇಷನ್ ಇದ್ದವರು ಸ್ಕೆಚ್ ಆರ್ಟಿಸ್ಟ್ ಆಗಬಹುದು. ಸ್ಕೆಚ್ ಆರ್ಟಿಸ್ಟ್ ಗಳಿಗಾಗಿ 6 ತಿಂಗಳುಗಳ ಡಿಪ್ಲೊಮಾ ಕೋರ್ಸ್‌ಗಳು ಲಭ್ಯವಿವೆ. ಇವುಗಳಲ್ಲಿ ತರಬೇತಿ ಪಡೆದು ಸರ್ಟಿಫಿಕೇಟ್‌ಗಳನ್ನು ಪಡೆಯುವುದರಿಂದ ಮುಂದೆ ಅದನ್ನು ಒಂದು ಸ್ವತಂತ್ರ ಉದ್ಯಮವಾಗಿ ಸ್ಥಾಪಿಸಲು ಸುಲಭವಾಗುತ್ತದೆ. ಫಾರೆನ್ಸಿಕ್ ಸ್ಕೆಚ್ ಆರ್ಟಿಸ್ಟ್ ಆಗುವವರ ವಿದ್ಯಾಭ್ಯಾಸ ಸ್ವಲ್ಪ ಹೆಚ್ಚು ಇರಬೇಕಾಗುತ್ತದೆ. ಅವರಿಗೆ ಕಾನೂನು, ನೀತಿ ನಿಯಮಗಳ ಪರಿಚಯ ಇರಬೇಕಾಗುತ್ತದೆ. ಅಥವಾ ಅವರು ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಫಾರ್ ಐಡೆಂಟಿಫಿಕೇಷನ್ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರಬೇಕು. ಈ ಉದ್ಯೋಗವನ್ನು ಪಾರ್ಟ್ ಟೈಂ ಅಥವಾ ಸ್ವತಂತ್ರವಾಗಿ ಉದ್ಯಮವಾಗಿ ಆರಂಭಿಸಬಹುದು. ವೇತನವು ಕೆಲಸದ ಕ್ರಮಬದ್ಧತೆಯ ಮೇಲೆ ನಿಗದಿಯಾಗುತ್ತದೆ. ಕೆಲಸ ಚೆನ್ನಾಗಿ ಮಾಡಿದಂತೆ ಕಲೆಗಾರನ ಪ್ರಸಿದ್ಧಿ ಹೆಚ್ಚುತ್ತದೆ. ಜತೆಗೆ ವೇತನವೂ. ಪ್ರೊಫೆಶನ್ ಬೇರೆಯಾಗಿದ್ದು, ಸ್ಕೆಚ್ ಆರ್ಟ್ ಫ್ಯಾಶನ್ ಆಗಿದ್ದರೆ ಪಾರ್ಟ್ ಟೈಂ ಕೆಲಸ ಆಗಿ ಮುಂದುವರಿಯಬಹುದು.
ಈ ಉದ್ಯೋಗಕ್ಕೆ ಅಪಾರ ಅವಕಾಶಗಳಿವೆ. ಕೆಲಸ ಉತ್ತಮವಾಗಿದ್ದರೆ ಅದನ್ನೇ ಉದ್ಯಮವಾಗಿ ಮುಂದುವರಿಸಬಹುದು.
Related Articles
ಇದಕ್ಕೆ ಪ್ರತ್ಯೇಕವಾಗಿ ಸಮಯದ ಅವಧಿ ಇಲ್ಲದುದರಿಂದ ಕಲಿಕೆಯ ಜತೆ ಜತೆಗೆ ಇದನ್ನು ಮಾಡಬಹುದು. ಚಿತ್ರ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಇದನ್ನು ಪಾರ್ಟ್ ಟೈಂ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ವ್ಯಕ್ತಿಗಳ ಚಿತ್ರ, ವಸ್ತುಗಳ ಚಿತ್ರಗಳನ್ನು ಬರೆಯಬಹುದು. ಒಂದು ಚಿತ್ರಕ್ಕೆ ಇಂತಿಷ್ಟು ಹಣ ಎಂದು ನಿರ್ಣಯ ಮಾಡಿ, ಬಿಡುವಿನ ವೇಳೆಯಲ್ಲಿ ಮಾಡಿ ಮುಗಿಸಬಹುದು.
Advertisement
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು