Advertisement
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಸಮೀಪವಿರುವ ಈ ಬೆಟ್ಟ ಮಂಜಿನ ಹೊದಿಕೆ ಹೊದ್ದು ಚಾರಣಿಗರ ಮನಸೂರೆಗೊಳಿಸುತ್ತದೆ. ವರ್ಷ ವಿಡೀ ಹೋಗಬಹುದಾಗಿದ್ದರೂ, ಚಳಿಗಾಲದಲ್ಲೇ ಬರುವವರ ಸಂಖ್ಯೆ ಹೆಚ್ಚು.ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1530 ಮೀಟರ್ ಎತ್ತರದಲ್ಲಿರುವ ಸ್ಕಂದಗಿರಿ ಬೆಟ್ಟವನ್ನು ತಲುಪಲು ಕನಿಷ್ಠ 2 ಗಂಟೆ ಬೇಕು.ಕಾಲುದಾರಿಯುದ್ದಕ್ಕೂ ಎರಡು ಬದಿಗಳಲ್ಲೂ ಗಿಡಗಂಟಿಗಳಿದ್ದು, ಅಲ್ಲಲ್ಲಿ ಸಿಗುವ ಬೃಹತ್ ಬಂಡೆಗಲ್ಲುಗಳ ಮೇಲೆ ಆಯಾಸವೆನ್ನಿಸಿದಾಗ ವಿರಮಿಸಬಹುದು.
ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಈ ತಾಣ ಒಂದು ದಿನದ ಚಾರಣಕ್ಕೆ ಸೂಕ್ತ. ಚಿಕ್ಕಬಳ್ಳಾಪುರದಿಂದ 3ಕಿ.ಮೀ ದೂರದಲ್ಲಿರುವ ಕಳವಾರ ಗ್ರಾಮದ ಮೂಲಕ ಪಾಪಾಗ್ನಿ ಮಠದಿಂದ -ಸ್ಕಂದಗಿರಿ ಬೆಟ್ಟ ತಲುಪಬಹುದು.
Related Articles
ಸ್ಕಂದಗಿರಿಗೆ ಬರುವ ಚಾರಣಿಗರಿಗೆ ಮುಂಗಡವಾಗಿ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಇದ್ದು, ಪ್ರವಾಸೋದ್ಯಮ ಇಲಾಖೆಯ ಜಾಲತಾಣದ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಮೊದಲು ಪ್ರತಿ ಒಬ್ಬ ರಿಗೆ 450 ರೂ. ಶುಲ್ಕ ನಿಗದಿಪಡಿಸಲಾಗಿತ್ತು, ಸದ್ಯ 250 ರೂಪಾಯಿಗೆ ಇಳಿಸಲಾಗಿದೆ.
Advertisement