Advertisement

ದಿಗ್ಬಂಧನದ ವೇಳೆ ಹಾಕಿ ಕೋಚ್‌ ರಿಂದ ಪುಸ್ತಕ ರಚನೆ

04:09 PM Apr 15, 2020 | keerthan |

ಹೊಸದಿಲ್ಲಿ: ಕೋವಿಡ್-19 ವೈರಸ್‌ನಿಂದ ವಿಶ್ವವೇ ದಿಗ್ಬಂಧನ ಆಗಿರುವಂತಹ ಸನ್ನಿವೇಶದಲ್ಲಿದೆ. ಮತ್ತೂಂದು ಕಡೆ ಭಾರತದಲ್ಲಿರುವ ನೆದರ್ಲೆಂಡ್‌ನ‌ ಮಹಿಳಾ ಹಾಕಿ ಮುಖ್ಯ ಕೋಚ್‌ ಜೆಯೊರ್ಡ್‌ ಮರಿನ್‌ ತಮ್ಮ ಅನುಭವ ಕಥನವನ್ನು ಅಕ್ಷರದ ರೂಪಕ್ಕೆ ಇಳಿಸಿದ್ದಾರೆ.

Advertisement

ಭಾರತದಲ್ಲಿ ಕೋವಿಡ್-19 ವೈರಸ್‌ ಜನರಿಗೆ ಎಷ್ಟು ಕಾಟ ಕೊಟ್ಟಿದೆ ಎನ್ನುವುದನ್ನು ಅವರು ವಿವರಿಸಿದ್ದಾರೆ. “ನನ್ನ ಕುಟುಂಬದವರೊಂದಿಗೆ ಇಂತಹ ಸಮಯದಲ್ಲಿ ನಾನಿಲ್ಲದೆ ತುಂಬಾ ಮನಸ್ಸಿಗೆ ಕಷ್ಟವಾಗುತ್ತಿದೆ. ಪುಸ್ತಕ ಬರೆಯುವುದರೊಂದಿಗೆ ನನ್ನನ್ನು ನಾನು ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದೇನೆ’ ಎಂದು ಕೋಚ್‌ ವಿವರಿಸಿದ್ದಾರೆ.

45 ವರ್ಷದ ಡಚ್ ಮೂಲದ ಕೋಚ್ ಮರಿನ್, ತನ್ನ ಕುಟುಂಬದಿಂದ ದೂರವಾಗಿದ್ದಾರೆ. ಮೂವರು ಹೆಣ್ಣು ಮಕ್ಕಳು, ಓರ್ವ ಮಗನಿಂದ ಈ ಕಷ್ಟ ಕಾಲದಲ್ಲಿ ದೂರವಾಗಿರುವ ಕೋಚ್ ಮರಿನ, ಸದ್ಯ ಬೆಂಗಳೂರಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next