ಧಾರವಾಡ: ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ಆಧಿಧೀನಕ್ಕೆ ಒಳಪಟ್ಟು 25ನೇ ವರ್ಷ ಪೂರೈಸಿದ ಪ್ರಯುಕ್ತ ರಾಯಾಪುರದಲ್ಲಿರುವ ಎಸ್‌ಜೆಎಂವಿ ಮಹಾಂತ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2016-17ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಆಯೋಜಿಸಲಾಗಿತ್ತು.
ಕವಿವಿ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ| ರಂಗರಾಜ ವನದುರ್ಗ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸೂಪ್ತ ಪ್ರತಿಭೆಧಿಯನ್ನು ಗುರುತಿಸುವ ನಿಟ್ಟಿನತ್ತ ಸ್ನೇಹ ಸಮ್ಮೇಳನದಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಸಮಾಜಮುಖೀಗಳಾಗಿ ಬೆಳೆಯಿರಿ ಎಂದರು.
ಪ್ರಾಚಾರ್ಯ ಡಾ| ಎನ್.ಬಿ.ಸಂಗಾಪೂರ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಎಸ್ ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ ಹಾಗೂ ವಿದ್ಯಾಪೀಠದ ಕಾರ್ಯನಿರ್ವಹಣ ನಿರ್ದೇಶಕ ಡಾ| ಈ. ಚಿತ್ರಶೇಖರ ಮಾತನಾಡಿದರು. ವಿದ್ಯಾಪೀಠದ ನಿರ್ದೇಶಕ ರಾಜು ಮರಳಪ್ಪನವರ ಬಹುಮಾನ ವಿತರಿಸಿದರು.
ಕೆ.ವಿ ಪ್ರಭಾಕರ, ಡಾ| ರಂಗರಾಜ ವನದುರ್ಗ, ಡಾ| ಶೇಖರ ತಡಹಾಳ ಅವರನ್ನು ಸನ್ಮಾನಿಸಲಾಯಿತು. ವಿಶ್ವನಾಥ, ಪ್ರೊ| ಎನ್.ಆರ್.ಬಾಳಿಕಾಯಿ, ಸಿದ್ದರಾಮಣ್ಣ ನಡಕಟ್ಟಿ ಇದ್ದರು. ಡಾ| ವೈ.ಎಸ್. ಬಾರಿಗಿಡ, ಪ್ರೊ|ಗಿರಿಜಾ ಕಡ್ಡಿಪುಡಿ, ಪ್ರೊ|ಎಸ್. ಸಿ. ಕೋಟಿ, ಪ್ರೊ|ಎಮ್.ಬಿ ಅಳಗವಾಡಿ, ನಾಗರಾಜಪ್ಪ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರೊ|ಬಿ.ಜಿ.ರಕರಡ್ಡಿ, ಡಾ|ಎಸ್.ಸುಜಾತಾ, ಪ್ರೊ|ಶಿರಿಯನ್ನಣ್ಣವರ, ಪ್ರೊ|ಸಿ.ಕೆ ಹುಬ್ಬಳ್ಳಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಡಾ|ಸಿ.ಎಂ. ಕಡಕೋಳ ಸ್ವಾಗತಿಸಿದರು. ಡಾ|ಎಸ್.ಎಚ್.ಪಂಚಾಕ್ಷರಿ, ಕೆ.ಎಸ್.ಶಾಂತಯ್ಯ ಪರಿಚಯಿಸಿದರು. ವಿದ್ಯಾರ್ಥಿ ಒಕ್ಕೂಟದ ಚೇರಮನ್ ಡಾ|ಪುಷ್ಪಾ ಬಸನಗೌಡರ ವಾರ್ಷಿಕ ವರದಿ ವಾಚಿಸಿದರು. ಆನಂದ ಕಡಕೋಳ, ಕಿರಣ ಅಂಗಡಿ ನಿರೂಪಿಸಿದರು. ಭರತ ಕಲಗೌಡರ ವಂದಿಸಿದರು.