Advertisement

Wedding Invitation: ಮದುವೆ ಆಮಂತ್ರಣದ ಜೊತೆ `ಸಿಯಾ ರಾಮ್’ ಮೂರ್ತಿ ವಿತರಣೆ..!

09:51 AM Feb 17, 2024 | Team Udayavani |

ರಬಕವಿ-ಬನಹಟ್ಟಿ : ಮದುವೆ ಸಮಾರಂಭವೆಂದರೆ ಅದ್ದೂರಿ ಇದ್ದೇ ಇರುತ್ತದೆ. ಇಲ್ಲಿ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸವಿ ನೆನಪಿಗಾಗಿ ಮದುವೆ ಆಮಂತ್ರಣ ನೆಪದಲ್ಲಿ ಪ್ರತಿ ಆಮಂತ್ರಿತರಿಗೂ 2 ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪಂಚಲೋಹದ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮವಿರುವ ಮೂರ್ತಿ ನೀಡಿ ಮದುವೆಗೆ ಆಹ್ವಾನಿಸಲಾಗುತ್ತಿದೆ.

Advertisement

ಇದು ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರ್‌ಎಸ್‌ಎಸ್ ಮುಖಂಡ ಸೋಮನಾಥ ಗೊಂಬಿಯವರು ತನ್ನ ಸುಪುತ್ರಿ ಲಕ್ಷ್ಮಿ ಜೊತೆ ಯೋಧನಾಗಿ ಸೇವೆ ಸಲ್ಲಿಸುತ್ತಿರುವ ರಬಕವಿಯ ಕಿರಣ ಮಹಾಲಿಂಗಪ್ಪ ಕಳ್ಳಿಗುದ್ದಿಯೊಂದಿಗೆ ಮದುವೆ ಕಾರ್ಯಕ್ರಮ. ಫೆ19, ಸೋಮವಾರದಂದು ನಡಯಲಿದೆ. ಇದರಿಂದ ಮನೆ ಮನೆಗೆ ಮದುವೆಯ ಆಮಂತ್ರಣ ಜೊತೆ 250 ಗ್ರಾಂ ಹೊಂದಿರುವ ಪಂಚಲೋಹದಿಂದ ತಯಾರಾದ `ಸಿಯಾ ರಾಮ್’ ಮೂರ್ತಿಯನ್ನು ನೀಡುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗುತ್ತಿದೆ.

ಹಿಂದೂ ಧರ್ಮದ ಸಂಕೇತವಾಗಿರುವ `ಸಿಯಾ ರಾಮ್’ ಮೂರ್ತಿಯು ಎಲ್ಲರ ಮನೆಯಲ್ಲಿ ಇರಬೇಕು. ಇದೊಂದು ಐತಿಹಾಸಿಕ ಮದುವೆ ಕಾರ್ಯಕ್ರಮವಾಗಿದೆ. ಸುಮಾರು 1500 ರೂ.ಗಳ ಬೆಲೆಯುಳ್ಳ ಮೂರ್ತಿ ನೀಡುವದರ ಮೂಲಕ ಹಿಂದುತ್ವದ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ನಾಡಿನ ವಿವಿಧ ಮಠಾಧೀಶರು ಹಾಗು ಗಣ್ಯರು ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

`ಹಿಂದುತ್ವದ ಸಂಕೇತವಾಗಿ ಶತಮಾನಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂಕೇತವಾಗಿ ಮಗಳ ಮದುವೆ ಆಮಂತ್ರಣದೊಂದಿಗೆ ಮೂರ್ತಿ ವಿತರಿಸುವ ಬಯಕೆಯಾಗಿದೆ’.
-`ಸೋಮನಾಥ ಗೊಂಬಿ, ಅಧ್ಯಕ್ಷರು, ಹಟಗಾರ ಸಮಾಜ, ಬಾಗಲಕೋಟ.

– ಕಿರಣ ಶ್ರೀಶೈಲ ಆಳಗಿ

Advertisement

ಇದನ್ನೂ ಓದಿ: Police Constable: ಮನೆಯಲ್ಲೇ ನೇಣಿಗೆ ಶರಣಾದ ಮಹಿಳಾ ಕಾನ್‌ಸ್ಟೇಬಲ್‌… ಕಾರಣ ನಿಗೂಢ

Advertisement

Udayavani is now on Telegram. Click here to join our channel and stay updated with the latest news.

Next