ನವದೆಹಲಿ : ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ ಆರನೇ ವಿಮಾನವು ಸೋಮವಾರ ಸಂಜೆ ದೆಹಲಿಯನ್ನು ತಲುಪಲಿದೆ.
ಉಕ್ರೇನ್ ಗಡಿ ದಾಟಿ ಹಂಗೇರಿಗೆ ಬಂದಿದ್ದ 240 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ. ಆರನೇ #ಆಪರೇಷನ್ ಗಂಗಾ ವಿಮಾನವು ಬುಡಾಪೆಸ್ಟ್ ನಿಂದ ಟೇಕ್ ಆಫ್ ಆಗಿದ್ದು, 240 ಭಾರತೀಯ ಪ್ರಜೆಗಳನ್ನು ದೆಹಲಿಗೆ ಹಿಂತಿರುಗಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನಿಂದ ಪಲಾಯನ ಮಾಡುವ ಇರಾನ್ ಅಥವಾ ಭಾರತದಂತಹ ಮೂರನೇ ದೇಶಗಳ ನಾಗರಿಕರಿಗೆ ಹಂಗೇರಿ ಮಾನವೀಯ ಕಾರಿಡಾರ್ ಅನ್ನು ತೆರೆದಿದೆ. ವೀಸಾ ಇಲ್ಲದೆ ಅವರನ್ನು ಒಳಗೆ ಬಿಡುತ್ತಿದೆ ಮತ್ತು ಅವರನ್ನು ಡೆಬ್ರೆಸೆನ್‌ನ ಹತ್ತಿರದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದೆ.
ಇದನ್ನೂ ಓದಿ : ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಚಿವರಿಗೆ ಹೊಣೆ; PM ಮೋದಿ ದಿಟ್ಟ ಕ್ರಮ
Related Articles
ಈಗಾಗಲೇ ೫ ವಿಮಾನಗಳಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದ್ದು, ಇನ್ನುಳಿದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನಗಳನ್ನು ಕೇಂದ್ರ ಸರಕಾರ ಮಾಡುತ್ತಿದೆ.