Advertisement

ಚೆನ್ನೈ –ಮೈಸೂರು ಸೇರಿದಂತೆ 6 ಮಾರ್ಗಗಳಲ್ಲಿ ಹೈಸ್ಪೀಡ್‌ ರೈಲು

08:23 AM Jan 30, 2020 | Hari Prasad |

ಹೊಸದಿಲ್ಲಿ: ಚೆನ್ನೈ-ಬೆಂಗಳೂರು- ಮೈಸೂರು ಸಹಿತ ದೇಶದ ಆರು ರೈಲು ಮಾರ್ಗಗಳಲ್ಲಿ ಹೈಸ್ಪೀಡ್‌ ರೈಲು ಓಡಿಸಲು ಚಿಂತನೆ ನಡೆಸಲಾಗುತ್ತಿದೆ. ಯೋಜನೆ ಅನುಷ್ಠಾನ ಗೊಳಿಸುವ ಬಗೆಗಿನ ವಿಸ್ತೃತ ಕಾರ್ಯಸಾಧ್ಯತಾ ವರದಿ (ಡಿಪಿಆರ್‌) ಒಂದು ವರ್ಷದ ಅವಧಿಯಲ್ಲಿ ಸಿದ್ಧಗೊಳ್ಳಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್‌ ತಿಳಿಸಿದ್ದಾರೆ.

Advertisement

ದಿಲ್ಲಿ – ನೋಯ್ಡಾ – ಆಗ್ರಾ – ಲಕ್ನೋ – ವಾರಾಣಸಿ, ದಿಲ್ಲಿ – ಜೈಪುರ-ಉದಯಪುರ – ಅಹದಾಬಾದ್‌, ಮುಂಬಯಿ – ನಾಸಿಕ್‌ – ನಾಗ್ಪುರ್‌, ಮುಂಬಯಿ – ಪುಣೆ – ಹೈದರಾಬಾದ್‌, ದಿಲ್ಲಿ – ಚಂಡೀಗಢ – ಲುಧಿಯಾನ – ಜಲಂಧರ್‌ – ಅಮೃತಸರ ಇತರ ಮಾರ್ಗಗಳು.

ಟ್ಯಾಗ್‌ ಅಳವಡಿಕೆ: ರೈಲು ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್ಐಡಿ) ಟ್ಯಾಗ್‌ಗಳನ್ನು ಅಳವಡಿಸಲಾಗುತ್ತದೆ. 2021ರ ಒಳಗಾಗಿ 3,50, 000 ಕೋಚ್‌ಗಳಿಗೆ ಮತ್ತು ವ್ಯಾಗನ್‌ಗಳಿಗೆ ಅಳವಡಿಸಲಾಗುತ್ತದೆ ಎಂದು ಬುಧವಾರ ರೈಲ್ವೇ ಮಂಡಳಿಯ ರೋಲಿಂಗ್‌ ಸ್ಟಾಕ್‌ ವಿಭಾಗದ ಸದಸ್ಯ ರಾಜೇಶ್‌ ಅಗರ್ವಾಲ್‌ ಹೇಳಿದ್ದಾರೆ.

ಅದಕ್ಕಾಗಿ 112 ಕೋಟಿ ರೂ. ವೆಚ್ಚವಾಗಲಿದೆ. ಸದ್ಯ 22 ಸಾವಿರ ವ್ಯಾಗನ್‌ ಮತ್ತು 1,200 ಕೋಚ್‌ಗಳಿಗೆ ಈಗಾಗಲೇ ವ್ಯವಸ್ಥೆಯನ್ನು ಅಳವಡಿ ಸಲಾಗಿದೆ ಎಂದಿದ್ದಾರೆ. ರೈಲು ಪ್ರತಿಗಂಟೆಗೆ 182 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದರೂ ಬಾರ್‌ ಕೋಡ್‌ ಸ್ಕ್ಯಾನ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next