ಬೆಂಗಳೂರು: ನಗರದಲ್ಲಿ ಕೋವಿಡ್ 19 ಆರ್ಭಟ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಮುಂದಿನ ಆರೇಳು ತಿಂಗಳು ಕೋವಿಡ್ 19 ಜತೆಯೇ ಜೀವನ ನಡೆಸುವ ಅನಿವಾರ್ಯತೆಯಿದ್ದು, ಅದರ ಪರಿಣಾಮ ನೇರವಾಗಿ ನಗರದ ಸಂಚಾರ ದಟ್ಟಣೆ ಮೇಲೆ ಉಂಟಾಗಲಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸಾರ್ವಜನಿಕರು ಸಮೂಹ ಸಾರಿಗೆಯತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದು, ಸ್ವಂತ ವಾಹನಗಳಲ್ಲಿ ಓಡಾಡಲು ಆರಂಭಿಸುವ ನಿರೀಕ್ಷೆ ಇದೆ. ಇದು ಹೀಗೆ ಮುಂದುವರಿದರೆ ಮುಂದಿನ ಆರೇಳು ತಿಂಗಳು ನಗರದಲ್ಲಿ ಸಂಚಾರ ದಟ್ಟಣೆ ಅಕ್ಷರಶಃ ನರಕವಾಗಲಿದೆ. ಜತೆಗೆ ವಾಯು ಮಾಲಿನ್ಯ ಕೂಡ ಹೆಚ್ಚಾಗಲಿದೆ. ಈಗಲೇ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಂಡು ಕ್ರಮಕೈಗೊಳ್ಳದಿದ್ದರೆ ಕಷ್ಟ ಎಂದು ಸಂಚಾರ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
70-75 ಲಕ್ಷ ವಾಹನ ಸಂಚಾರ: ನಗರದಲ್ಲಿ ಎಲ್ಲ ಮಾದರಿಯ ಸುಮಾರು 85 ಲಕ್ಷ ವಾಹನಗಳಿದ್ದು, ನಿತ್ಯ 45-50 ಲಕ್ಷ ವಾಹನಗಳು ಸಂಚರಿಸುತ್ತಿದ್ದವು. ಕೋವಿಡ್ 19 ಕಾಣಿಸಿದ ಬಳಿಕ ದಿನಂಪ್ರತಿ 20-25 ಸಾವಿರಕ್ಕೆ ಆ ಸಂಖ್ಯೆ ಇಳಿದಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕ ಸಂಚಾರ ದಟ್ಟನೆ ಕ್ರಮೇಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರೇಳು ತಿಂಗಳು ನಗರದಲ್ಲಿ 70-75 ಲಕ್ಷ ವಾಹನಗಳು ಓಡಾಡುವ ಸಾಧ್ಯತೆಯಿದೆ. ಆಗ ಅನಿವಾರ್ಯವಾಗಿ ನಗರದ ಸಿಬಿಡಿ ಹಾಗೂ ಹೈಡೆನ್ಸಿಟಿ ಕಾರಿಡಾರ್ ಪ್ರದೇಶಗಳು ಸೇರಿ ಎಲ್ಲೆಡೆ ಭಾರೀ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷತಾ ದೃಷ್ಟಿಯಿಂದ ಆದಷ್ಟು ಸಮೂಹ ಸಾರಿಗೆಯಲ್ಲೇ ಸಂಚರಿಸಲು ಮನವಿ ಮಾಡುವ ಬಗ್ಗೆ ಯೋಜನೆ ಸಿದಟಛಿಪಡಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಖಾಸಗಿ-ಸರ್ಕಾರಿ ನಿರ್ಧಾರ ಬಳಿಕ ತೀರ್ಮಾನ: ಖಾಸಗಿ ಕಂಪನಿಯ ವಾಹನಗಳ(ಉದ್ಯೋಗಿಗಳನ್ನು ಕರೆದೊಯ್ಯುವವರು ಹಾಗೂ ಇತರೆ) ಮಾಲೀಕರು ಹಾಗೂ ಸಮೂಹ ಸಾರಿಗೆ ನಿಗಮಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕರೆದೊಯ್ಯಬೇಕಿರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ವಾಹನಗಳು ಕಾರ್ಯಾಚರಣೆ ನಡೆಸುತ್ತವೆ. ಹೀಗಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಧಾರದ ಬಳಿಕ ಸಂಚಾರ ವಿಭಾಗದಿಂದ ಸಂಚಾರ ನಿರ್ವಹಣೆಗೆ ಏನೆಲ್ಲಾ ಕ್ರಮಕೈಗೊಳ್ಳಬೇಕೆಂದು ನಿರ್ಧರಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಹೇಳಿದರು.
ವಾಯುಮಾಲಿನ್ಯ ಹೆಚ್ಚಳ: ನಿರೀಕ್ಷೆಗೂ ಮೀರಿದ ವಾಹನಗಳಿಂದ ಸಂಚಾರ ದಟ್ಟಣೆ ಜತೆಗೆ ವಾಯುಮಾಲಿನ್ಯ ಕೂಡ ಹೆಚ್ಚಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನಗರದಲ್ಲಿ ವಾಯುಮಾಲಿನ್ಯ ಪರಿಣಾಮ ಶೇ.10-20ರಷ್ಟು ಮಾತ್ರ ಇತ್ತು. ಸಮೂಹ ಸಾರಿಗೆ ಕಡಿಮೆಯಾಗಿ, ಸ್ವಂತ ವಾಹನಗಳು ಹೆಚ್ಚಾದರೆ ಅದು ಶೇ.100ಕ್ಕೆ ತಲುಪುವ ಸಾಧ್ಯತೆಯಿದೆ. ಈ ಕೂಡಲೇ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಕ್ರಮಕೈಗೊಳ್ಳದಿದ್ದರೆ ಸಂಚಾರ ನಿಯಂತ್ರಣ ಕಷ್ಟವಾಗಲಿದೆ ಎಂದು ಸಂಚಾರ ತಜ್ಞ ಎಂ.ಎನ್.ಶ್ರೀಹರಿ ತಿಳಿಸಿದರು.
ಸರ್ವೇ ಕಾರ್ಯ ಆರಂಭ: ಲಾಕ್‌ಡೌನ್ ಮೊದಲು ಸರ್ವೇ ನಡೆಸಿದಾಗ ಶೇ.48ರಷ್ಟು ಮಂದಿ ಮಾತ್ರ ಸಮೂಹ ಸಾರಿಗೆ ಬಳಕೆ ಮಾಡುತ್ತಿದ್ದರು. ಲಾಕ್ ಡೌನ್ ಬಳಿಕ ಅಷ್ಟೇ ಪ್ರಮಾಣದಲ್ಲಿ ಬಳಕೆ ಮಾಡುತ್ತಾರಾ ಅಥವಾ ಯಾವ ಸಮಯ(ಸಡಿಲಿಕೆ ಬಳಿಕ ವಾರ, ತಿಂಗಳು)ದಲ್ಲಿ ಬಳಕೆ ಮಾಡುತ್ತಾರೆ ಸೇರಿ ಇತರೆ ಮಾಹಿತಿಯನ್ನೊಳಗೊಂಡಂತೆ ಬಿ-ಪ್ಯಾಕ್ ಎಂಬ ಖಾಸಗಿ ಸಂಸ್ಥೆ ಸರ್ವೇ ಕಾರ್ಯ ಆರಂಭಿಸಿದ್ದು, ನಾಲ್ಕೈದು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು. ಕೋವಿಡ್-19 ಕಡಿವಾಣಕ್ಕಾಗಿ ಸರ್ಕಾರಗಳು ಸುರಕ್ಷಿತ ಕ್ರಮಗಳನ್ನೊಳಗೊಂಡ ಹಲವು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಬಿ.ಪ್ಯಾಕ್ ಸಂಸ್ಥೆ, ಲಾಕ್ ಡೌನ್ ತೆರವಿನ ನಂತರ ನಗರದಲ್ಲಿ ಮುಖ್ಯವಾಗಿ ಸಮೂಹ ಸಾರಿಗೆ ಸಂಸ್ಥೆಗಳು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವಾಹನಗಳನ್ನು ಕಾರ್ಯಾಚರಣೆಗೆ ಇಳಿಸಬೇಕು. ಪ್ರಯಾಣಿಕರು ಕೂಡ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಬಿ.ಪ್ಯಾಕ್ ಸಂಸ್ಥೆಯ ಸಿಇಒ ರೇವತಿ ಅಶೋಕ್ ಹೇಳಿದರು.
ಸಂಚಾರ ಉಲ್ಲಂಘನೆ: ಡಿಜಿಟಲ್ ಪ್ರಕರಣ ದಾಖಲು: ನಗರದಲ್ಲಿ ನಿತ್ಯ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದಟಛಿ ‘ಡಿಜಿಟಲ್ ಮಾದರಿ’ಯಲ್ಲಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ಸಿದಟಛಿತೆ ನಡೆಸಿದ್ದಾರೆ. ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ವಾಹನಗಳ ದಟ್ಟಣೆ ಕಡಿಮೆ ಇತ್ತು. ಜತೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುತ್ತಿರಲಿಲ್ಲ. ಬಳಿಕ ಎಚ್ಚರಿಕೆಗಾಗಿ ವಾಹನ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತಿತ್ತು.
ಟ್ರಾಫಿಕ್ ವಾರ್ಡನ್ ಹೆಚ್ಚಳ: ಈಗಾಗಲೇ ನಗರದಲ್ಲಿ 250ಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಿತವಾಗಿ ಟ್ರಾಫಿಕ್ ವಾರ್ಡನ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಈ ಸಿಬ್ಬಂದಿಯನ್ನು ಇನ್ನಷ್ಟು ಮಂದಿ ಹೆಚ್ಚಳ ಮಾಡಿ ಎಲ್ಲೆಡೆ ಸಂಚಾರ ನಿರ್ವಹಣೆ ಜತೆಗೆ ನಿಯಮ ಉಲ್ಲಂ ಸಿದ ವಾಹನ ಸವಾರರ ವಾಹನ ಸಮೇತ ಫೋಟೋ ತೆಗೆದು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಸಾಧ್ಯವಾದಷ್ಟು ನೇರವಾಗಿ ಕಾರ್ಯಾಚರಣೆಗಿಂತ ಡಿಜಿಟಲ್ ಮೂಲಕ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.
* ಮೋಹನ್ ಭದ್ರಾವತಿ