Advertisement

ಒಡಿಶಾದಲ್ಲಿ ಬೈಕಿಗೆ ಕಾರು ಢಿಕ್ಕಿ: 3 ಮಹಿಳೆಯರ ಸಹಿತ 6 ಮಂದಿ ಸಾವು

11:42 AM Oct 20, 2018 | Team Udayavani |

ಪುರಿ : ಕಾರೊಂದು ಬೈಕಿಗೆ ಢಿಕ್ಕಿ ಹೊಡೆದು ಕೊಳವೊಂದಕ್ಕೆ ಉರುಳಿ ಬಿದ್ದ ಭೀಕರ ದುರಂತದಲ್ಲಿ ಆರು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಒಡಿಶಾ ದ ಪುರಿ ಜಿಲ್ಲೆಯ ಪಿಪ್ಲೀ ಎಂಬಲ್ಲ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಬಾಲಕಿ ಸೇರಿದ್ದಾರೆ.

Advertisement

ಪುರಿ-ಭುವನೆಶ್ವರ ಹೆದ್ದಾರಿಯಲ್ಲಿ ಶುಕ್ರವಾರ ನಡು ರಾತ್ರಿ ಈ ದುರ್ಘ‌ಟನೆ ನಡೆದಿದೆ. ಮೋಟಾರ್‌ ಬೈಕಿನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕಿಗೆ ಢಿಕ್ಕಿ ಹೊಡೆದ ಬಳಿಕ ಕೊಳಕ್ಕೆ ಉರುಳಿ ಬಿದ್ದ ಕಾರನ್ನು ಸ್ಥಳೀಯರು ಮೇಲಕ್ಕೆತ್ತಿದರು. ಆದರೆ ಅದರೊಳಗಿದ್ದ ನಾಲ್ವರು ಅದಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next