Advertisement
ಚಿತ್ರದುರ್ಗ ಜಿಲ್ಲೆಯಲ್ಲಿ ಮನೆ ಗೋಡೆ ಕುಸಿದು 3 ತಿಂಗಳ ಬಾಣಂತಿ ಸೇರಿ ಮೂವರು ಅಸುನೀಗಿದರೆ, ಕೋಲಾರದಲ್ಲಿ ಮನೆ ಕುಸಿದು 50 ವರ್ಷದ ವ್ಯಕ್ತಿ ಹಾಗೂ ಶ್ರೀನಿವಾಸಪುರದಲ್ಲಿ ನೀರಲ್ಲಿ ಕೊಚ್ಚಿ ಹೋಗಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಚಿಕ್ಕಬಳ್ಳಾಪುರ ದಲ್ಲಿ ವ್ಯಕ್ತಿ ಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಒಟ್ಟು ಐವರು ಕೊಚ್ಚಿ ಹೋಗಿದ್ದರು, ನಾಲ್ವರನ್ನು ರಕ್ಷಿಸಲಾಗಿದೆ.
ಇದುವರೆಗೆ ಮಳೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 104, ಧಾರವಾಡ ಜಿಲ್ಲೆಯಲ್ಲಿ 210 ಮನೆ ಗಳು, ಹಾವೇರಿಯಲ್ಲಿ 567 ಸಹಿತ ರಾಜ್ಯಾದ್ಯಂತ ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಚಿತ್ರದುರ್ಗ ಜಿಲ್ಲೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 166 ಕೆರೆಗಳ ಪೈಕಿ 22 ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.
Related Articles
ಮಳೆಯಿಂದಾಗಿ ಧಾರವಾಡ, ಹಾವೇರಿ, ಕೊಪ್ಪಳ, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ನ. 20ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Advertisement
ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಪರಿಹಾರಕ್ಕೆ ಸಿಎಂ ತಾಕೀತುತುರ್ತು ಕಾಮಗಾರಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒ ಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. 130 ಕೋಟಿ ರೂ. ಬಿಡುಗಡೆ
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ಬೆಳೆ ಹಾನಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಮಾಹಿತಿ ಪಡೆಯಲು ಸೂಚಿಸಲಾಗಿದೆ. ನಷ್ಟ ಪರಿಹಾರಕ್ಕೆ 130 ಕೋಟಿ ರೂ. ಬೆಳೆ ಬಿಡುಗಡೆ ಮಾಡ ಲಾಗುವುದು ಎಂದರು. ಮನೆ ಬಿದ್ದಿದ್ದರೆ ತತ್‌ಕ್ಷಣ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು. ತಮಿಳುನಾಡು, ಆಂಧ್ರದಲ್ಲಿ 21 ಸಾವು
ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಮನೆ ಕುಸಿದು ಒಂದೇ ಕುಟುಂಬದ ಒಂಬತ್ತು ಮಂದಿ ಪ್ರಾಣ ತೆತ್ತಿದ್ದಾರೆ. ಅತ್ತ ಆಂಧ್ರಪ್ರದೇಶದಲ್ಲಿ ಮೂರು ಬಸ್‌ಗಳು ಪ್ರವಾ ಹಕ್ಕೆ ಸಿಲು ಕಿದ್ದು, 12 ಮಂದಿ ಸಾವ ನ್ನಪ್ಪಿದ್ದಾರೆ. 18 ಮಂದಿ ಕಾಣೆ ಯಾಗಿದ್ದಾರೆ. ತಿರುಪತಿಯಲ್ಲೂ ಭಾರೀ ಮಳೆ ಯಾಗಿದ್ದು, ದೇಗುಲವನ್ನು ಸಂಪರ್ಕಿಸುವ ನಾಲ್ಕು ರಸ್ತೆಗಳಲ್ಲಿ ನೀರು ತುಂಬಿ ಕೊಂಡಿದೆ.