Advertisement

ಥಾಣೆ : ಎಟಿಎಂ ಕಾರ್ಡ್‌ ವಂಚನೆ ಜಾಲದ 6 ಮಂದಿ ಅರೆಸ್ಟ್‌

05:07 PM May 12, 2018 | udayavani editorial |

ಥಾಣೆ : ಬ್ಯಾಂಕ್‌ ಗ್ರಾಹಕರ ಖಾತೆಯಿಂದ ಹಣ ಕೊಳ್ಳೆ ಹೊಡೆಯುವ ಎಟಿಎಂ ಕಾರ್ಡ್‌ ಜಾಲದ ಆರು ಮಂದಿಯನ್ನು ಬಂಧಿಸುವುದರೊಂದಿಗೆ ತಾವು ಈ ಜಾಲವನ್ನು ಭೇದಿಸಿರುವುದಾಗಿ ಥಾಣೆ ಪೊಲೀಸರು ಹೇಳಿಕೊಂಡಿದ್ದಾರೆ. ಬಂಧಿತರಲ್ಲಿ ಇಬ್ಬರು ಉತ್ತರ ಪ್ರದೇಶದವರಾಗಿದ್ದಾರೆ.

Advertisement

ಬಂಧಿತರಲ್ಲಿ ಒಬ್ಟಾತನು ತಾನು ಫಿಲಂ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿರುವವನೆಂದು ಹೇಳಿದ್ದಾನೆ. 

ಕಳೆದ ಮೇ 10ರಂದು ಮುಂಬಯಿ – ಅಹ್ಮದಾಬಾದ್‌ ಹೈವೇಯಲ್ಲಿನ ನೈಗಾಂವ್‌ ಎಂಬಲ್ಲಿ ಎಟಿಎಂ ಕಾರ್ಡ್‌ ವಂಚನೆ ಖದೀಮರನ್ನು  ಖಚಿತ ಸುಳಿವಿನ ಆಧಾರದಲ್ಲಿ  ಖೆಡ್ಡಾಗೆ ಬೀಳಿಸಲಾಯಿತು ಎಂದು ಸಹಾಯಕ ಪೊಲೀಸ್‌ ಕಮಿಷನರ್‌ (ಕ್ರೈಂ) ಮುಕುಂದ್‌ ಹತೋಟೆ ತಿಳಿಸಿದ್ದಾರೆ. 

ಈ ಜಾಲದ ಖದೀಮರು ಬ್ಯಾಂಕ್‌ ಗ್ರಾಹಕರ ಪಿನ್‌ ನಂಬರ್‌ ಕದ್ದು  ಎಟಿಎಂ ಹ್ಯಾಕ್‌ ಮಾಡಿ ಹಣ ಲಪಟಾಯಿಸುತ್ತಿದ್ದರು ಎಂದು ಹತೋಟೆ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next