ಮಂಗಳೂರು: ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠವು ಗುರುವಾರ ರಾಘವೇಂದ್ರತೀರ್ಥ ಯಾನೆ ಶಿವಾನಂದ ಪೈ ಹಾಕಿದ ಅರ್ಜಿಯನ್ನು ವಜಾ ಮಾಡಿ ಆತನನ್ನು ಸಿಬಿಐಗೆ ವಿಚಾರಣೆಗೆ ಒಪ್ಪಿಸುವಂತೆ ಆದೇಶಿಸಿದೆ.
ಆತನ ಪಿಟಿಷನ್ ರದ್ದುಗೊಳಿಸಿ ಸಿಬಿಐ ವಿಚಾರಣೆಗೆ ಯಾವುದೇ ಅಡ್ಡಿ ಯಿಲ್ಲ ಎಂದು ಸ್ಪಷ್ಟಪಡಿಸಿದೆ.ಎರ್ನಾಕುಲಂ ಜಿಲ್ಲಾ ನ್ಯಾಯಾ ಲಯದಲ್ಲಿ ವಿಚಾರಣೆ ಬಾಕಿಯಿರುವ ಕಾರಣ ಅದರ ಅಂತಿಮ ತೀರ್ಪಿಗಾಗಿ ಕಾದಿರಿಸಲಾಗಿತ್ತು ಎಂದು ಪಿಟಿಷನರ್ ತಿಳಿಸಿದ್ದಾರೆ.
ಶ್ರೀ ಕಾಶೀ ಮಠ ಸಂಸ್ಥಾನದ 234 ಬಂಗಾರದ ಆಭರಣ, ಬೆಳ್ಳಿಯ ವಸ್ತುಗಳು ಮತ್ತು ಸಂಸ್ಥಾನಕ್ಕೆ ಸೇರಿದ ವಜ್ರ ವೈಢೂರ್ಯ ಸೇರಿದಂತೆ ಎಲ್ಲವನ್ನು ಶಿವಾನಂದ ಪೈ ಯಾನೆ ಚೋಟುವಿನಿಂದ ಹಿಂಪಡೆ ಯಬೇಕು ಎಂದು ನ್ಯಾಯಾಲಯದ ಏಕಸದಸ್ಯ ಪೀಠ ಹೇಳಿದೆ.
ಶ್ರೀ ಕಾಶೀ ಮಠ ಸಂಸ್ಥಾನದ ಪದಚ್ಯುತ ಸ್ವಾಮೀಜಿ ರಾಘವೇಂದ್ರ ತೀರ್ಥ ಯಾನೆ ಶಿವಾನಂದ ಪೈಯನ್ನು ಬೆಂಗಳೂರು ಹೊರವಲಯದಲ್ಲಿ ಮಾ.6ರಂದು ಆಂಧ್ರಪ್ರದೇಶದ ಸಿಐಡಿ ಪೊಲೀಸರು ಬಂಧಿಸಿದ್ದರು.ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನುಅಪಹರಿಸಿ ಶಿವಾನಂದಪೈ ಕಳೆದ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ತಿರುಪತಿ ಮತ್ತು ಕಡಪ ನ್ಯಾಯಾಲಯಗಳು ಈ ಸೊತ್ತುಗಳನ್ನು ಸಂಸ್ಥಾನಕ್ಕೆ ಹಿಂದಿರುಗಿಸುವಂತೆ ಆತನಿಗೆ ಆದೇಶ ನೀಡಿದ್ದವು. ನ್ಯಾಯಾಲಯದ ಆದೇಶಕ್ಕೆ ಬೆಲೆನೀಡದೆ ತಲೆಮರೆಸಿಕೊಂಡಿದ್ದರಿಂದ, ಕೇರಳ ಪೋಲಿಸರು ಕೂಡ
ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದ್ದರು. ಹಾಗೆಕರ್ನಾಟಕ ಸಹಿತ 3 ರಾಜ್ಯಗಳಲ್ಲಿ ಶಿವಾನಂದ ಪೈ ವಿರುದ್ಧ ಕೇಸುದಾಖಲಾಗಿತ್ತು.
ಸಿಬಿಐ ಈತನ ವಿರುದ್ಧ “ರೆಡ್ ಕಾರ್ನರ್’ ನೋಟಿಸ್ ಹೊರಡಿಸಿ, ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು.