Advertisement

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್

12:38 PM Jan 29, 2022 | Team Udayavani |

ಬೆಂಗಳೂರು :ಹೂ ಅಂಟಾವ ಮಾವ, ಉಹೂ ಅಂಟಾವ..! ರಾಜಕಾರಣಿಗಳ ಸ್ಥಿತಿ ಐಟಂ ಸಾಂಗ್ ನಂತಾಗಿದೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.

Advertisement

ಕಾಂಗ್ರೆಸ್-ಬಿಜೆಪಿ ಪಕ್ಷಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಜತೆ ಮಾತನಾಡಿದ ಅವರು,  ಎರಡು ಪಕ್ಷದ ಪಕ್ಷಾಂತರಿಗಳಿಗೆ ಟಾಂಗ್ ನೀಡಿದ್ದಾರೆ.

ರಾಜಕಾರಣಿಗಳ ಸ್ಥಿತಿ ಇವತ್ತು ಐಟಂ ಸಾಂಗ್​ನಂತಾಗಿದೆ. ನಾವ್​​ ಯಾರ್ಗೂ ಫೋನೂ ಮಾಡಂಗಿಲ್ಲ, ಮಾತೂ ಆಡಂಗಿಲ್ಲ. ಮಾತಾಡಿದರೆ ಪಕ್ಷಾಂತರ ಎನ್ನುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸಚಿವ‌ಸ್ಥಾನ ಆಕಾಂಕ್ಷಿಯಾಗಿರುವ ರಾಜುಗೌಡರಿಗೆ ಎರಡು ಬಾರಿ ಅವಕಾಶ ತಪ್ಪಿದೆ.‌ಯಡಿಯೂರಪ್ಪ‌ ಬಣದಲ್ಲಿ ಗುರುತಿಸಿಕೊಂಡಿರುವ ಅವರು ಪಕ್ಷಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next