ಮಂಡ್ಯ: ಕೋವಿಡ್ ಸೋಂಕಿನ ಎರಡನೇ ಅಲೆ ಜಿಲ್ಲೆಯಲ್ಲಿ ಭಾರಿ ಅವಾಂತರ ಸೃಷ್ಟಿಸುತ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆಡ್‌ಗಳು ಸಿಗದೆ ಸೋಂಕಿತರು ಆಸ್ಪತ್ರೆಯ ಪಡಸಾಲೆಯಲ್ಲಿಯೇ ಆಕ್ಸಿಜನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಮ್ಸ್‌ನಲ್ಲಿ ಬೆಡ್‌ಗಳ ಕೊರತೆ ಇರುವುದರಿಂದ ಸೋಂಕಿತರು ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ. ಮಿಮ್ಸ್‌ನ ತುರ್ತು ಚಿಕಿತ್ಸಾ ವಾರ್ಡ್ ಪಕ್ಕದಲ್ಲಿಯೇ ಸೋಂಕಿತರ ವಾರ್ಡ್‌ಗಳಿದ್ದು, ಬೆಡ್ ಇಲ್ಲದೆ ಸೋಂಕಿತರು ನರಕ ಅನುಭವಿಸುವಂತಾಗಿದೆ.
ಕಾರಿಡಾರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಯಾವುದೇ ವಿದ್ಯುತ್, ಫ್ಯಾನೂ ಇಲ್ಲದಂತಾಗಿದೆ. ಸೋಂಕಿ ತರ ಸಂಬಂ ಕರು ಬೆಳಕಿಗಾಗಿ ಮೊಬೈಲ್ ಟಾರ್ಚ್ ಬಳಸಿ ದರೆ, ಫ್ಯಾನ್‌ಗಾಗಿ ಮೆಡಿಕಲ್ ವರದಿಗಳಿಂದಲೇ ಬೀಸುತ್ತಾ, ತಮ್ಮವರ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ರೋಗಿಗಳ ಸಂಬಂ ಕರು ಆಕ್ರೋಶ ವ್ಯಕಪಡಿಸಿದ್ದಾರೆ.
ಮಂಡ್ಯ, ಮಳವಳ್ಳಿ, ಮದ್ದೂರು, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಹಾಗೂ ಶ್ರೀರಂಗಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಗಳಲ್ಲೂ ಬೆಡ್‌ಗಾಗಿ ಸಾರ್ವಜನಿಕರು ಪರದಾಡುವಂತಾ ಗಿದೆ. ಅಲ್ಲಿನ ಶಾಸಕರು ಕ್ಷೇತ್ರದ ಜನರಿಗೆ ಬೆಡ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೂ ನಿರೀಕ್ಷೆ ಮೀರಿ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಅವ್ಯವಸ್ಥೆಗಳ ಕೂಪವಾಗಿ ಆಸ್ಪತ್ರೆಗಳ ಪರಿಸ್ಥಿತಿ ಬಿಗಡಾಯಿಸುತ್ತಿದೆ.
150 ಬೆಡ್‌ಗಳ ವಾರ್ಡ್‌ಗೆ ಆಕಿಜನ್ ಕೊರತೆ: ಮಿಮ್ಸ್ ನಲ್ಲಿ 150 ಆಕ್ಸಿಜನ್ ಬೆಡ್‌ಗಳ ವಾರ್ಡ್ ತೆರೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ಅಗತ್ಯದಷ್ಟು ಆಕ್ಸಿಜನ್ ಪೂರೈಕೆಯಾಗಿಲ್ಲ ಎಂದು ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ಇದು ಸಹ ರೋಗಿಗಳಿಗೆ ಬೆಡ್ ಕೊರತೆ ಉಂಟಾಗಲು ಕಾರಣವಾಗಿದೆ. ಇನ್ನಾದರೂ ಜಿಲ್ಲೆಯ ಸಂಸದರು ಹಾಗೂ ಶಾಸಕರು ಶ್ರಮಿಸಬೇಕು ಎಂದು ಕರುನಾಡ ಸೇವಕರು ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು.
ಕ್ಷೇತ್ರ ಸುತ್ತುತ್ತಿರುವಸಚಿವ, ಶಾಸಕರು : ಸೋಂಕಿತರು ಬೆಡ್‌ಗಳು ಸಿಗದೆ ನರಳುವಂತಾಗಿದೆ. ಆದರೆ ಜಿಲ್ಲೆಯ ಶಾಸಕರು ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿ ಸುಮ್ಮನಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳ ಬಗ ಸೆY ರಿಪಡಿಸಲು ಮುಂದಾಗುತ್ತಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಆಸ್ಪತ್ರೆ, ಕೋವಿಡ್ ಸೆಂಟರ್ ಗಳ ಭೇಟಿ ಮುಂದುವರಿದಿದೆ. ಪಾಂಡವಪುರ ತಾಲೂಕಿನಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಮೊಕ್ಕಾಂ ಹೂಡಿ ಕೋವಿಡ್ ಸೆಂಟರ್, ಆಸ್ಪತ್ರೆಗಳಿಗೆ ಭೇಟಿ ನೀಡಿ ಅ ಕಾರಿಗಳ ಎಚ್ಚರಿಸುತ್ತಿದ್ದಾರೆ. ಇತ್ತ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಕ್ಷೇತ್ರ ಸುತ್ತುತ್ತ ಸೋಂಕಿತ ಗ್ರಾಮಗಳಿಗೆ ತೆರಳಿ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಜತೆಗೆ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ನಾಗಮಂಗಲ ಶಾಸಕ ಸುರೇಶ್‌ಗೌಡ ಕೂಡ ಆಸ್ಪತ್ರೆಗಳಿಗೆ ತೆರಳಿ ಸೋಂಕಿತರ ಸಮಸ್ಯೆ ಆಲಿಸುತ್ತಿದ್ದಾರೆ