Advertisement

ಸೋದರಳಿಯನ ಪ್ರಗತಿಗೆ ಶ್ರಮಿಸುತ್ತಿರುವ ಮಮತಾ ಬ್ಯಾನರ್ಜಿ ಇನ್ಮುಂದೆ ಏಕಾಂಗಿ: ಶಾ ಆಕ್ರೋಶ

06:17 PM Jan 31, 2021 | Team Udayavani |

ಪಶ್ಚಿಮಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಜನರ ಹಿತರಕ್ಷಣೆಯನ್ನು ನಿರ್ಲಕ್ಷಿಸಿದ್ದರಿಂದಲೇ ಹಲವಾರು ಟಿಎಂಸಿ ನಾಯಕರು ಬಿಜೆಪಿ ಸೇರುತ್ತಿದ್ದಾರೆ.  ಮುಂದಿನ ಚುನಾವಣೆ ಸಮಯದಲ್ಲಿ  ಮಮತಾ ಏಕಾಂಗಿಯಾಗಿ ಉಳಿಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

Advertisement

ಹೌರದಲ್ಲಿನ ಪಕ್ಷದ ಕಾರ್ಯಕರ್ತರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಪಕ್ಷದಿಂದ ಮತ್ತಷ್ಟು ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಸುಳಿವು ಬಿಟ್ಟುಕೊಟ್ಟರು. ಏತಕ್ಕಾಗಿ ಹಲವಾರು ಟಿಎಂಸಿ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎನ್ನುವುದರ ಕುರಿತಾಗಿ ಮಮತಾ ಬ್ಯಾನರ್ಜಿ ಆಲೋಚಿಸಬೇಕಾಗಿದೆ. ರಾಜ್ಯದ ಜನರನ್ನು ನಿರಾಸೆಗೊಳಿಸಿದ್ದರಿಂದಲೇ ಈ ಸ್ಥಿತಿ ಬಂದೊದಗಿದೆ ಎಂದು ಕಿಡಿಕಾರಿದರು.

ಮೋದಿ ಸರ್ಕಾರ ‘ಜನ್ ಕಲ್ಯಾಣ್’  ದೃಷ್ಠಿಯಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಆದರೇ ಮಮತಾ ತಮ್ಮ ಸೋದರಳಿಯನ ಉದ್ದಾರಕ್ಕೆ ಶ್ರಮಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಉದ್ಧವ್ ಠಾಕ್ರೆ ಮೊದಲು ಕೋವಿಡ್ ನಿಯಂತ್ರಿಸುವ ಕೆಲಸ ಮಾಡಲಿ: ಜಗದೀಶ್ ಶೆಟ್ಟರ್

ಮಾ, ಮಾಟಿ, ಮಾನುಷ್ (ತಾಯಿ, ಭೂಮಿ, ಜನರು) ಎಂಬ ಟಿಎಂಸಿಯ ಘೋಷಣೆಯನ್ನು ಉಲ್ಲೇಖಿಸಿದ ಶಾ, ತಮ್ಮ ಉದ್ಘೋ಼ಷದಂತೆ ನಡೆಯದೆ ತೃಣಮೂಲ ಕಾಂಗ್ರೆಸ್  ಸುಲಿಗೆ, ಭ್ರಷ್ಟಾಚಾರ ಹಾಗೂ ಓಲೈಕೆಯ ರಾಜಕಾರಣದಲ್ಲಿ ತೊಡಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರ ಪಡೆಯಲಿದ್ದು, ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲಾಗುವುದು ಎಂದರು.

Advertisement

ಚುನಾವನೆ ಹಿನ್ನಲೆ ಆಡಳಿತರೂಢ ಟಿಎಂಸಿ ಮತ್ತು ಬಿಜೆಪಿಯ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಶುಕ್ರವಾರ (ಜ. 29) ಟಿಎಂಸಿಯಿಂದ ಹೊರನಡೆದು ಕೆಲವು ರೆಬೆಲ್ ಶಾಸಕರೊಂದಿಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿ ಮಾಡಿದ್ದರು.  ಕಳೆದ ಡಿಸೆಂಬರ್ ನಲ್ಲಿ ಮಾಜಿ ಸಚಿವ ಸುವೆಂಧು ಅಧಿಕಾರಿ ಕೂಡ ಟಿಎಂಸಿ ಪಕ್ಷ ತ್ಯೆಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದಿದ್ದ ಆರೋಗ್ಯ ಕಾರ್ಯಕರ್ತೆ ಸಾವು; ತೆಲಂಗಾಣದಲ್ಲಿ 3ನೇ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next