ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಗೆ ಸೇರಿದ ಕುರಂಕೋಟೆ ಗ್ರಾಮದಲ್ಲಿ ನೂತನ ಎಂಎಸ್‌ಐಎಲ್ ಮದ್ಯದ ಅಂಗಡಿ ತೆರೆಯಲು ಸ್ಥಳ ವೀಕ್ಷಣೆಗೆ ಬಂದಂತಹ ಅಬಕಾರಿ ಇಲಾಖೆಯ ನಿರೀಕ್ಷಕಿಯಾದ ಶ್ರೀಲತಾ ಅವರ ನಿಲುವುನ್ನು ಗ್ರಾಮಸ್ಥರು ಮತ್ತು ಸ್ತ್ರೀ ಶಕ್ತಿ ಮಹಿಳೆಯರು ಪ್ರಶ್ನಿಸಿ ಕೆಲವು ಸಮಯಗಳ ಕಾಲ ಪ್ರತಿಭಟನೆ ನಡೆಸಿ ಅಬಕಾರಿ ನಿರೀಕ್ಷಕಿಯವರಿಗೆ ಮನವಿ ಪತ್ರ ಸಲ್ಲಿಸುವುದರೊಂದಿಗೆ ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯದಲ್ಲಿ ಇತಿಹಾಸವುಳ್ಳ ದೇವಾಲಯಗಳಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರಂಕೋಟೆ ದೊಡ್ಡಕಾಯಪ್ಪ ಆಂಜನೇಯ ಸ್ವಾಮಿ ದೇವಾಲಯ ಕೂಡ ಒಂದು, ಈಗಾಗಲೇ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ. ಇದರ ಮಧ್ಯೆ ಗ್ರಾಮದಲ್ಲಿ ಮತ್ತೆ ಮದ್ಯದ ಅಂಗಡಿ ತೆರೆಯಲು ಸರ್ಕಾರ ಮುಂದಾಗಿದೆ, ಸ್ಥಳ ಪರಿಶೀಲನೆ ನಡೆಸಲು ಬಂದ ಅಬಕಾರಿ ಇಲಾಖೆಯ ನಿರೀಕ್ಷಕಿಯಾದ ಶ್ರೀಲತಾ ಅವರಿಗೆ ಗ್ರಾಮದ ಸುತ್ತಮುತ್ತಲಿನ ಮಹಿಳೆಯರು ಮದ್ಯದ ಅಂಗಡಿ ತೆರೆಯದಂತೆ ಆಕ್ರೋಶ ಹೊರ ಹಾಕಿ ಅಬಕಾರಿ ಇಲಾಖೆಯ ನಿರೀಕ್ಷಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಮದ್ಯಪಾನ ಪ್ರಿಯರು ಹಳ್ಳಿಗಳಲ್ಲಿ ಮಧ್ಯವನ್ನು ದುಪ್ಪಟ್ಟು ವೆಚ್ಚದಲ್ಲಿ ಖರೀದಿ ಮಾಡುತ್ತಿದ್ದೇವೆ, ಆದ್ದರಿಂದ ಎಂಎಸ್‌ಐಎಲ್ ನೂತನ ಮದ್ಯದ ಅಂಗಡಿಯನ್ನು ಪ್ರಾರಂಭಿಸಬೇಕು ಎಂದು ಅಬಕಾರಿ ನಿರೀಕ್ಷಕರಿಗೆ ಮನವಿಯನ್ನು ಸಲ್ಲಿಸಿದಂತಹ ಅಪರೂಪದ ಘಟನೆ ನಡೆದಿದೆ.
ಲಲಿತಮ್ಮ ಅವರಿಗೆ ಸೇರಿದ ಖಾತೆ ನಂ12/9ರ ನೂತನ ಎಂಎಸ್‌ಐಎಲ್ ಮಧ್ಯದ ಮಾರಾಟಕ್ಕೆ ಸರ್ಕಾರದ ಆದೇಶದಂತೆ ಸ್ಥಳ ವೀಕ್ಷಣೆಗೆ ಬಂದ ಸಮಯದಲ್ಲಿ ಇಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೆ, ಮದ್ಯಪಾನ ಪ್ರಿಯರು ಪ್ರಾರಂಭಿಸುವಂತೆ ಮನವಿ ಸಲ್ಲಿಸಿದ್ದು, ಎರಡು ವಿಷಯದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.-
ಶ್ರೀಲತಾ, ಅಬಕಾರಿ ನಿರಿಕ್ಷಕರು
ಮಧ್ಯದ ಮಾರಾಟವನ್ನು ನಿಲ್ಲಿಸಲೂ ವ್ಯವಸ್ಥೆ ಮಾಡುತ್ತಿರುವವರು, ಹಳ್ಳಿಗಳಲ್ಲೂ ಅಕ್ರಮವಾಗಿ ಮಧ್ಯ ಮಾರಾಟ ಮಾಡದಂತೆ ತಡೆಯಬೇಕು, ಹಳ್ಳಿಗಳಲ್ಲಿ ಮಾರಾಟ ಮಾಡಲು ಶುರು ಮಾಡಿದರೆ, ಮಧ್ಯಪಾನ ಖರೀದಿಗೆ ಪ್ರತಿದಿನ ಮಧ್ಯಪಾನ ಪ್ರಿಯರು ಬರ್ತಾರೆ, ಕುಡಿದು ಬಂದು ಮನೆಗಳಲ್ಲಿ ಗಲಾಟೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ತೊಂದರೆಕೊಡುತ್ತಿದ್ದಾರೆ. ಆದ್ದರಿಂದ ಹಳ್ಳಿಗಳಲ್ಲೂ ಮಾರಾಟ ಮಾಡುವುದನ್ನ ತಕ್ಷಣ ನಿಲ್ಲಿಸಲಿ, ಎಂಎಸ್‌ಐಎಲ್ ಮಧ್ಯದ ಅಂಗಡಿಯನ್ನು ತೆರಯದಂತೆ ಸರ್ಕಾರಕ್ಕೆ ಮಹಿಳೆಯರೆಲ್ಲಾ ಮನವಿಯನ್ನು ಸಲ್ಲಿಸಿದ್ದೇವೆ.-
ಶೀಲಮ್ಮ
ಹೊಲತಾಳು ಗ್ರಾಮ