ಮುಂಬಯಿ:ಕರ್ನಾಟಕಾದ್ಯಂತ ತೆರೆಕಂಡು ಜನಮೆಚ್ಚುಗೆ ಪಡೆದ ಸೀತಾನದಿ ಕನ್ನಡ ಚಲನಚಿತ್ರವು ಸೆ. 17 ರಂದು ಅಂಧೇರಿ ಪೂರ್ವದ ಪಿವಿಆರ್ ಹೌಸ್‌ಫುಲ್ ಪ್ರದರ್ಶನಗೊಂಡಿತು.
ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಅವರು ದೀಪಪ್ರಜ್ವಲಿಸಿ ಮಾತನಾಡಿ, ನಮ್ಮ ಯುವ ಪ್ರತಿಭೆಗಳಾದ ಸುಧಾಕರ್ ಶೆಟ್ಟಿ ಮತ್ತು ನರೇಂದ್ರ ಕಬ್ಬಿನಾಲೆಯವರು ಸೇರಿಕೊಂಡು ಒಂದು ಒಳ್ಳೆಯ ಸಂದೇಶಭರಿತ ಚಿತ್ರವನ್ನು ಮಾಡಿದ್ದಾರೆ. ಒಳ್ಳೆಯ ದಕ್ಕೆ ನಾವು ಯಾವಾಗಲೂ ಸಹಕರಿ ಸಬೇಕು. ನೈಜತೆಯಿಂದ ಕೂಡಿರುವ ಈ ಚಲನಚಿತ್ರವನ್ನು ಮುಂಬಯಿ ತುಳು-ಕನ್ನಡಿಗರು ನೋಡಿ ಅವರನ್ನು ಹುರಿದುಂಬಿಸಿ ಸಹಕರಿಸಬೇಕು. ನಮ್ಮೂರಿನ ಸೊಗಡನ್ನು ಬಹಳ ಸುಂದರವಾಗಿ ಚಲನಚಿತ್ರದಲ್ಲಿ ಅಚ್ಚಾಗಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.
ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಮಾತ ನಾಡಿ, ನರೇಂದ್ರ ಕಬ್ಬಿನಾಲೆ ಅವರು ಈ ಹಿಂದೆ ನನ್ನ ಹತ್ತಿರ ಈ ಸಿನೇಮಾದ ಬಗ್ಗೆ ಮಾತನಾಡಿದ್ದರು. ಆದರೆ ಮೊನ್ನೆ ಬಂದು ಸಿನೇಮಾವನ್ನು ಮುಂಬಯಿ ಯಲ್ಲಿ ಬಿಡುಗಡೆ ಮಾಡುವುದಾಗಿ ಕೇಳಿಕೊಂಡಾಗ ತುಂಬಾ ಖುಷಿಯಾಯಿತು. ಸಿನೇಮಾವು ವಿಭಿನ್ನತೆಯಿಂದ ಕೂಡಿದ್ದು, ಎಲ್ಲರು ನೋಡಲೇ ಬೇಕು ಎಂದು ಹೇಳಿದರು.
ಕಲಾಪೋಷಕ, ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ ಅವರು ಮಾತನಾಡಿ, ಸಿನೇಮಾವು ನಮ್ಮೂರಿನಲ್ಲಿ ಹರಿಯುವ ಸೀತಾ ನದಿಯ ಸುತ್ತಮುತ್ತ ನಡೆಯುವ ಒಂದು ಕುಟುಂಬದ ಕಥೆಯೆಂದು ಕೇಳಿ ತುಂಬಾ ಸಂತೋಷವಾಯಿತು. ಹೆಣ್ಣು ಮತ್ತು ನದಿಗೆ ಹೋಲಿಸಿ ಮಾಡಿರುವ ಈ ಸಿನೇಮಾದಲ್ಲಿ ಉತ್ತಮ ಸಂದೇಶವಿದೆ. ಇಡೀ ಚಿತ್ರ ನಮ್ಮೂರು ಮುದ್ರಾಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ನಮ್ಮೂರಿನ ಹುಡುಗರು ಸೇರಿ ಮಾಡಿರುವ ಈ ಚಿತ್ರಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದು ತಂಡಕ್ಕೆ ಶುಭಹಾರೈಸಿದರು.
ಮುಂಬಯಿ ಪದ್ಮಶಾಲಿ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿಗಾರ್, ಹರ್ಷ್ ಫೌಂಡೇಷನ್‌ನ ಪ್ರಧಾನ ಟ್ರಸ್ಟಿ ಕೃಷ್ಣಾನಂದ ಶೆಟ್ಟಿಗಾರ್, ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಸಾಲ್ಯಾನ್, ಚಿತ್ರಕತೆಗಾರ ನರೇಂದ್ರ ಕಬ್ಬಿನಾಲೆ ಉಪಸ್ಥಿತರಿದ್ದರು. ನೂರಾರು ಮಂದಿ ತುಳು-ಕನ್ನಡಿಗರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರತಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರಕ್ಕೆ ಮುಂಬಯಿ ಉದ್ಯಮಿ ಸುಧಾಕರ್ ಶೆಟ್ಟಿ ಮುನಿಯಾಲ್ ಬಂಡವಾಳ ಹೂಡಿದ್ದಾರೆ. ಪ್ರಸಿದ್ಧ ಕಲಾವಿದರ ತಂಡವು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷವೆ.