Advertisement
ಸೃಜನ್ ಗಣೇಶ್ ಹೆಗಡೆ ಅವರು ಬರೆದಿರುವ “ಮಿಥಿಲೆಯ ಮೊಗ್ಗು’ ಕಾದಂಬರಿಯು ಹಿರಿಯ – ಕಿರಿಯ ಸಾಹಿತ್ಯ ಪ್ರೇಮಿಗಳಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ.
Related Articles
Advertisement
ಹೆಣ್ಣಿನ ಮೇಲೆ ತೀವ್ರವಾದ ಶೋಷಣೆ ನಡೆಯುತ್ತಿರುವ ಈ ಕಾಲದಲ್ಲಿ ಒಬ್ಬ ಲೇಖಕರು ಹೆಣ್ಣಿನ ಮನದ ಮಾತನ್ನು ಇಷ್ಟು ಗಾಢವಾಗಿ ಹೊರತೆಗೆದು ತೋರಿರುವುದು ಶ್ಲಾಘನೀಯ. ಹೆಣ್ಣಿನ ಭಾವಕ್ಕೆ ಮತ್ತು ಬದುಕಿಗೆ “ಮೊಗ್ಗು’, “ಹೂವು’ ಜೀವ ಭಾವ ವನ್ನು ಸಮೀಕರಿಸಿ ತೋರಿರುವ ಪ್ರಯತ್ನವೂ ಶ್ಲಾಘನೀಯ. ಹಾಗೆಂದು ಇಲ್ಲಿ ಕೇವಲ ಹೆಣ್ಣಿನ ಭಾವದ ಚಿತ್ರ ಎಂದು ಮಾತ್ರವಲ್ಲ ಶ್ರೀರಾಮನ ಭಾವವನ್ನೂ ಸೆರೆ ಹಿಡಿಯುವ ಪ್ರಯತ್ನ ಮಾಡಲಾಗಿದೆ.
ವಿಶೇಷವಾಗಿ ಈ ಕಾದಂ ಬರಿಯಲ್ಲಿ ಹನುಮಂತನ ಪಾತ್ರ ಚಿತ್ರಣವು ಕಾವ್ಯದ ಪರಿಪಾಕವಾಗಿ ಕಂಡುಬರು ತ್ತದೆ. ಮೂಲತಃ ಆಂಜನೇ ಯನು ಕರ್ನಾಟಕದ ಕುಡಿಯಾಗಿ ಕಾಣು ವಾಗ, ಅದನ್ನಷ್ಟೇ ಸೊಗಸಾಗಿ ಕಟ್ಟಿಕೊಟ್ಟಿರು ವುದು ಗಮನಿಸಬೇಕಾದುದು.ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀ ಚಿನ ದಿನಗಳಲ್ಲಿ ಯುವ ಮನಸ್ಸುಗಳು ಓದು, ಬರಹ, ಜ್ಞಾನದ ಅರಿವಿನಿಂದ ದೂರ ಸರಿದು ಅಗತ್ಯವಿಲ್ಲದ ಯಾವುದೋ ಸಂಗತಿಗಳಿಗೆ ಮನಸ್ಸನ್ನು ಒಡ್ಡುತ್ತಿರುವಾಗ ಇನ್ನೂ 23ರ ಹರೆಯದ ಲೇಖಕರ ಯುವ ಮನಸ್ಸು ಇಂಥ ಸಾಧನೆಯನ್ನು ಮಾಡುತ್ತಿರುವುದು ಸಂತೋಷದ ವಿಚಾರ. ಬಹಳ ಸುಂದರವಾದಂಥ ಈ ಕೃತಿಗೆ ಒಪ್ಪುವಂಥ ಆಕರ್ಷಕ ಮುಖಪುಟದ ಚಿತ್ರ ವನ್ನು ಕಾವ್ಯಾ ಸಾಮಕ್ ಅವರು ನೀಡಿ¨ªಾರೆ. ಇಡೀ ಕೃತಿಯ ಅಂತರಾಳವನ್ನು ಮುಖ ಪುಟವು ಸೂಕ್ಷ್ಮವಾಗಿ ನಮಗೆ ತಿಳಿಸಿ ಕೊಡು ತ್ತದೆ. ಈ ಕೃತಿಯ ಓದು ಎಂಥವರಿಗೂ ಒಂದು ಆನಂದವನ್ನು ನೀಡುತ್ತದೆ. ಜತೆಗೆ ಹೊಸ ತಲೆಮಾರಿನ ಲೇಖಕರ ಬಗ್ಗೆ ಭರವಸೆಯನ್ನೂ ತುಂಬಿಕೊಳ್ಳಲು ಸಹಕಾರಿಯಾಗುತ್ತದೆ. – ಭಾಗ್ಯಶ್ರೀ, ಶಿವಮೊಗ್ಗ