Advertisement

Ramayan: ಮನಕಲಕುವ ಪಾತ್ರವೇ ಸೀತೆ

07:17 AM Mar 10, 2024 | Team Udayavani |

ಸೀತೆ ಎಂದರೆ ನೆನಪಾಗುವುದು ರಾಮ, ರಾಮಾಯಣ, ರಾಮಾಯಣದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಮತ್ತು ದೃಶ್ಯಗಳು ಕಣ್ಣಿನ ಮುಂದೆ ಬಂದರೆ ಮನಕಲಕುವಂತದ್ದೇ !

Advertisement

ಭೂಮಿಯ ಮಗಳು ಎಂದು ವರ್ಣಿಸಲ್ಪಟ್ಟ ಸೀತೆಯು ರಾಮಾಯಣದ ಪ್ರಕಾರ ವಿದೇಹದ ರಾಜ ಜನಕರು ಯಜ್ಞದ ಭಾಗವಾಗಿ ಭೂಮಿಯಲ್ಲಿ ಉಳುಮೆ ಮಾಡುವಾಗ ಸೀತೆಯನ್ನು ಕಂಡು ದತ್ತು ಪಡೆದರು.

ವಿಷ್ಣುವಿನ ಪತ್ನಿ ಲಕ್ಷ್ಮೀಯ ರೂಪವೆಂದು ಪರಿಗಣಿಸುವ ಸೀತಾ, ಸಿಯಾ, ಜಾನಕಿ, ಮೈಥಿಲಿ, ವೈದೇಹಿ ಮತ್ತು ಭೂಮಿಜಾ ಎಂದು ಸೀತೆಯನ್ನು ಕರೆಯುತ್ತಾರೆ.

ಸೀತೆಯು ಪತಿವ್ರತೆ. ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ ಮತ್ತು ಶುದ್ಧತೆಗೆ ಹೆಸರುವಾಸಿಯಾಗಿದ್ದಾಳೆ. ಸ್ವಯಂವರದಲ್ಲಿ ಅಯೋಧ್ಯೆಯ ರಾಜಕುಮಾರ ರಾಮನನ್ನು ತನ್ನ ಪತಿಯಾಗಿ ಆರಿಸಿಕೊಂಡಳು. ಕೈಕೇಯಿಯು ದಶರಥ ಮಹಾರಾಜರಿಗೆ ರಾಮ ವನವಾಸಕ್ಕೆ ಹೋಗುವಂತೆ ಬೇಡಿಕೆ ಇಡುತ್ತಾಳೆ. ಹೆಂಡತಿಗೆ ಮಾತು ಕೊಟ್ಟ ತಪ್ಪಿಗೆ ದಶರಥ ಮಹಾರಾಜರು ತತ್ತರಿಸಿ ಹೋಗುತ್ತಾರೆ. ಅಪ್ಪನ ಮಾತು ಉಳಿಸಿಕೊಳ್ಳಲು ರಾಮ ಎಲ್ಲವನ್ನು ತೊರೆದು ವನವಾಸಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಸೀತೆಯು ಸಹ ರಾಮನ ಜತೆಗೆ ನಡೆಯುತ್ತಾಳೆ. ಲಕ್ಷ್ಮಣ ಕೂಡ ಇವರಿಬ್ಬರ ಜತೆಗೆ ಹೋಗುತ್ತಾನೆ. ದಂಡಕ ಕಾಡಿನಲ್ಲಿ ನೆಲೆಸುತ್ತಾರೆ.

ವನವಾಸಕ್ಕೆ ತೆರಳುವ ಮೊದಲು ತಂದೆ ಜನಕ ಮಹಾರಾಜನು ಸೀತಾ ದೇವಿಯನ್ನು ಜಾನಕಪುರಕ್ಕೆ ಬರುವಂತೆ ಕೇಳಿಕೊಂಡರು. ಆದರೆ, ಸೀತೆ ನಾನು ನನ್ನ ಪತಿ ಧರ್ಮವನ್ನು ಬಿಟ್ಟು ಬರುವುದಿಲ್ಲವೆಂದು ಹೇಳಿ ಪತಿಯೊಂದಿಗೆ ಕಾಡಿಗೆ ತೆರಳುತ್ತಾಳೆ.

Advertisement

ಶೂರ್ಪನಖಿ ರಾಮನ ರೂಪಕ್ಕೆ ಸೋತು ರಾಮನನ್ನು ಬಯಸುತ್ತಾಳೆ. ಅದರೆ ರಾಮ ಸೀತೆಯನ್ನು ಬಿಟ್ಟು ಯಾರಿಗೆ ಬಯಸುವುದಿಲ್ಲ. ಸೀತೆ ಒಬ್ಬಳೇ ರಾಮನ ಹೃದಯದಲ್ಲಿ ಇರುವುದು, ಬೇರೆ ಯಾರಿಗೂ ಜಾಗವಿಲ್ಲ ಎಂದು ಅರಿತು ಅಸೂಯೆ ಪಟ್ಟು ಶೂರ್ಪನಖಿ ತನ್ನ ಅಣ್ಣನ ಮೊರೆ ಹೋಗುತ್ತಾಳೆ. ರಾವಣ ಸೀತೆಯನ್ನು ಮಾರೀಚ ರಾಕ್ಷಸನ ಸಹಾಯದಿಂದ ಭವ್ಯವಾದ ಜಿಂಕೆ ರೂಪವನ್ನು ಧರಿಸಿ ಸೀತೆಯನ್ನು ಆಕರ್ಷಿಸುತ್ತಾನೆ. ಸೀತೆ ಸುಂದರವಾದ ಮಾಯ ಜಿಂಕೆಯನ್ನು ಕಂಡು ಲಕ್ಷ್ಮಣ ಹಾಕಿದ ಗೆರೆಯನ್ನು ಕೂಡ ದಾಟಿ ಜಿಂಕೆಯ ಹಿಂದೆ ಹೋಗುತ್ತಾಳೆ. ಇದೆ ಸಮಯ ಕಾದಿದ್ದ ರಾವಣ ಸೀತೆಯನ್ನು ಅಪಹರಣ ಮಾಡುತ್ತಾನೆ. ವಾಟಿಕಾ ಉದ್ಯಾನದಲ್ಲಿ ಸೆರೆಯಾಳಾಗಿ ಬಂಧಿಸುತ್ತಾನೆ. ಇತ್ತ ರಾಮ ಸೀತೆಯನ್ನು ಹುಡುಕಲು ಹನುಮಂತನನ್ನು ಕಳುಹಿಸಿದನು. ಕೊನೆಗೂ ಹನುಮಂತ ಸೀತೆಯ ಇರುವಿಕೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದನು.

ರಾವಣನನ್ನು ಸೋಲಿಸಿ ಯುದ್ಧ ಮಾಡಿ ಅಂತಿಮವಾಗಿ ಸೀತೆಯನ್ನು ರಕ್ಷಿಸಿದನು ರಾಮ. ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ತೆರಳಿದಾಗ ರಾಮ ಸೀತೆಗೆ ಪಟ್ಟಾಭಿಷೇಕವಾಗುತ್ತದೆ. ಹೀಗೆ ಶ್ರೀ ರಾಮನ ಮಂತ್ರಿ ರಾಜ ಬೀದಿಯಲ್ಲಿ ಸುತ್ತಬೇಕಾದರೆ ಅಲ್ಲಿ ಕೆಲವು ಜನರು ರಾಮ ಮತ್ತು ಸೀತೆ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ. ಜನರೆಲ್ಲ, ಸೀತೆ ಇಷ್ಟು ದಿವಸ ರಾವಣನ ಲಂಕೆಯಲ್ಲಿ ಇದ್ದು ಬಂದವಳು. ಆದರೂ, ಮರ್ಯಾದ ಪುರುಷೋತ್ತಮ ಶ್ರೀರಾಮ ಆಕೆಯನ್ನು ಅಗ್ನಿಪರೀಕ್ಷೆಗೆ ಈಡು ಮಾಡದೆ ತನ್ನ ಅರಮನೆಯಲ್ಲಿಟ್ಟಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು.

ರಾಮನ ಮಂತ್ರಿ ರಾಮನಿಗೆ ತಿಳಿಸುತ್ತಾನೆ. ಆಗ ರಾಮನು ಎಲ್ಲರ ಮುಂದೆ ಸೀತೆಯನ್ನು ತನ್ನ ಪರಿಶುದ್ಧತೆಯನ್ನು ಸಾಬೀತುಪಡಿಸಲು ಅಗ್ನಿ ಪ್ರಯೋಗಕ್ಕೆ ಒಳಪಡಿಸುತ್ತಾನೆ. ಸೀತೆ ಪವಿತ್ರಳೆಂದು ಸಾಬೀತು ಮಾಡುತ್ತಾಳೆ. ಅಗ್ನಿಪರೀಕ್ಷೆ ನಡೆಯಿತು. ನೊಂದ ಸೀತೆ ಭೂಮಿ ತಾಯಿ ಕರೆದುಕೊಂಡು ಬಿಡು ಸಾಕಾಗಿದೆ ಪರೀಕ್ಷೆಗಳನ್ನು ಕೊಟ್ಟು, ಭೂಮಿ ಬಿರಿದು ಸೀತೆ ಸ್ವರ್ಗ ಸೇರಿದಳು.

ವಾಣಿ

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next