Advertisement

ಅಕ್ಷಯ್‌ ಕುಮಾರ್‌ಗೆ ಸಮನ್ಸ್‌

08:15 AM Nov 12, 2018 | Karthik A |

ಚಂಡೀಗಢ: ಪಂಜಾಬ್‌ನ ಬೆಹಬಾಲ್‌ ಕಲಾನ್‌ ಮತ್ತು ಕೊಟ್ಕಾಪುರದಲ್ಲಿ 2015ರಲ್ಲಿ ನಡೆದಿದ್ದ ಪೊಲೀಸರ ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಅಕ್ಷಯ ಕುಮಾರ್‌ಗೆ ಸಮನ್ಸ್‌ ನೀಡಲಾಗಿದೆ. ಅವರ ಜತೆಗೆ ಮಾಜಿ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಇಬ್ಬರು ಪುತ್ರರಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ. ನ. 16ರಂದು ನಟ ಅಕ್ಷಯ್‌ ಕುಮಾರ್‌ಗೆ, ನ. 19 ಹಾಗೂ 21ರಂದು  ಬಾದಲ್‌ ಅವರ ಇಬ್ಬರು ಪುತ್ರರಿಗೆ ಹಾಜರಾಗುವಂತೆ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next