ಬೆಂಗಳೂರು: ಐಎಂಎಯ ಬಹುಕೋಟಿ ವಂಚನೆ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ನೇಮಿಸಿರುವ ಎಸ್‌ಐಟಿ ತಂಡಕ್ಕೆ ಡಿಐಜಿ ರವಿಕಾಂತೇ ಗೌಡ ಅವರು ನೇತೃತ್ವ ವಹಿಸಲಿದ್ದಾರೆ. ಮತ್ತು10 ಮಂದಿ ಅಧಿಕಾರಿಗಳು ವಿಶೇಷ ತನಿಖಾ ತಂಡದಲ್ಲಿ ಇರಲಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ತನಿಖಾ ತಂಡದಲ್ಲಿರುವ ಅಧಿಕಾರಿಗಳ ಪಟ್ಟಿಯನ್ನು ಪೋಸ್ಟ್ ಮಾಡಿದ್ದಾರೆ.
ವಿಶೇಷ ತನಿಖಾ ತಂಡದಲ್ಲಿ ಡಿಸಿಪಿಗಳಾದ ಎಸ್.ಗಿರೀಶ್, ಎಸಿಪಿ ಬಾಲರಾಜು, ಡಿವೈಎಸ್‌ಪಿಗಳಾದ ಕೆ.ರವಿಶಂಕರ್, ರಾಜಾ ಇಮಾಮ್ ಖಾಸಿಂ, ಅಬ್ದುಲ್ ಖಾದರ್, ಇನ್ಸ್‌ಪೆಕ್ಟರ್‌ಗಳಾದ ಸಿ.ಆರ್.ಗೀತಾ, ಎಲ್.ವೈ ರಾಜೇಶ್, ಅಂಜನ್ ಕುಮಾರ್, ತನ್ವೀರ್ ಅಹ್ಮದ್ ಮತ್ತು ಬಿ.ಕೆ.ಶೇಖರ್ ಅವರಿದ್ದಾರೆ.
ಮಂಗಳವಾರ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲು ತೀರ್ಮಾನಿಸಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು ಬಳಿಕ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಮುಸ್ಲಿಂ ಶಾಸಕರ ನಿಯೋಗ ಎಸ್‌ಐಟಿ ತನಿಖೆಗೆ ವಹಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ
ಎಸ್‌ಐಟಿ ತನಿಖೆಗೆ ವಹಿಸಲು ನಿರ್ಧರಿಸಲಾಗಿತ್ತು.