Advertisement

ಮದುವೆ ಮನೆಗೆ ಎಸ್‌ಐಟಿ ಕಾವಲು 

07:05 AM Jul 08, 2018 | |

ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡ, ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಶನಿವಾರ ಮದುವೆ ಕಾರ್ಯಕ್ರಮವೊಂದಕ್ಕೆ ಶಂಕಿತ ಆರೋಪಿ ಬರುವ ನಿರೀಕ್ಷೆಯಲ್ಲಿ ಆತನಿಗಾಗಿ ಕಾದು, ಬರಿಗೈಯಲ್ಲಿ ಮರಳಿದೆ. 

Advertisement

ಕಳೆದ 20 ದಿನಗಳಿಂದ ಬೆಳಗಾವಿಯಲ್ಲಿಯೇ ಎಸ್‌ಐಟಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಗೌರಿ ಲಂಕೇಶ್‌ ಹತ್ಯೆಯ ಪ್ರಮುಖ ಆರೋಪಿ ಪರುಶರಾಮ ವಾಗ್ಮೋರೆ ತನಿಖೆ ವೇಳೆ ಬಾಯಿ ಬಿಟ್ಟಿರುವ ಮಾಹಿತಿ ಆಧರಿಸಿ ಬಸ್ತವಾಡ ಗ್ರಾಮದಲ್ಲಿ ಯುವಕರಿಬ್ಬರ ವಿಚಾರಣೆಗೆ ಬಂದಿಳಿದಿದ್ದರು. ಶುಕ್ರವಾರ ತಡರಾತ್ರಿ ಬಸ್ತವಾಡಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದರು. ಗ್ರಾಮದಲ್ಲಿ ಶನಿವಾರ ವಿವಾಹ ಕಾರ್ಯಕ್ರಮವಿತ್ತು. ಅದರಲ್ಲಿ ಶಂಕಿತ ಆರೋಪಿ ಪಾಲ್ಗೊಳ್ಳಬಹುದು ಎಂದು ಶಂಕಿಸಿ ಎಸ್‌ಐಟಿ ತಂಡದವರು ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಬೀಡು ಬಿಟ್ಟು ನಿಗಾ ಇರಿಸಿದ್ದರು. ಮಾರುವೇಷದಲ್ಲಿ ಬಂದಿದ್ದ ತಂಡದವರು ಮಧ್ಯಾಹ್ನ ಮದುವೆ ಮುಗಿಯುವವರೆಗೂ ಕಾಯುತ್ತ ಕುಳಿತಿದ್ದರು. ಕೊನೆ ಕ್ಷಣದವರೆಗೂ ಆತ ಬರಲಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಬೆಳಗಾವಿಗೆ ಮರಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next