Advertisement
ತಾಲೂಕಿನಲ್ಲಿ ರಾಷ್ಟ್ರೀಕೃತ 35ಕ್ಕೂ ಹೆಚ್ಚು ಬ್ಯಾಂಕ್‌ಗಳಿದ್ದು, ಅಷ್ಟೇ ಸಂಖ್ಯೆಯ ಎಟಿಎಂಗಳಿವೆ. ಆದರೆ ಬಹುಪಾಲು ಎಟಿಎಂಗಳಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ಜಾರಿಯಾಗುತ್ತಿಲ್ಲ. ಎಟಿಎಂ ಒಳಗೆ ಒಬ್ಬರ ನಂತರ ಮತ್ತೊಬ್ಬರು ಪ್ರವೇಶ ಮಾಡಬೇಕು. ಆದರೆ ಇಬ್ಬರು ಮೂವರು ಎಟಿಎಂ ಒಳಗಡೆ ನಿಂತಿರುತ್ತಾರೆ. ಎಲ್ಲಿಯೂ ಅಂತರ ಪಾಲನೆಯಾಗುತ್ತಿಲ್ಲ, ಕೋವಿಡ್ ಸಾಂಕ್ರಾಮಿಕ ರೋಗವಾಗಿದ್ದರಿಂದ ಪದೇ ಪದೇ ಕೈತೊಳೆದುಕೊಳ್ಳಬೇಕು. ಎಲ್ಲ ಕಡೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕೆಂದು ತಾಲೂಕು ಆಡಳಿತದ ಸೂಚನೆಯಾಗಿದೆ. ಆದರೆ ಎಟಿಎಂಗಳಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಸಾರ್ವಜನಿಕ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಜಿಲಾಡಳಿತ ಸೂಚನೆಯಾಗಿದೆ. ಆದರೆ ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಈ ನಿಯಮವನ್ನು ಗಾಳಿಗೆ ತೂರಿದ್ದಾರೆಂದು ಗ್ರಾಹಕರ ಆರೋಪವಾಗಿದೆ.
ವೆಂಕಟೇಶ್, ಗ್ರಾಹಕ