Advertisement

ಹೊಲಿಗೆ ಯಂತ್ರಗಳ ವಿತರಣೆ

03:39 PM Jun 01, 2020 | Naveen |

ಸಿರುಗುಪ್ಪ: ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಬಟ್ಟೆ ಹೊಲಿಯುವುದು ಸೇರಿದಂತೆ ಅನೇಕ ಸಣ್ಣಪುಟ್ಟ ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡರೆ ಅನುಕೂಲವಾಗುತ್ತದೆ ಎಂದು ಶಾಸಕ ಎಂ.ಎಸ್‌.ಸೋಮಲಿಂಗಪ್ಪ ತಿಳಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಕೈಗಾರಿಕಾ ಅಭಿವೃದ್ಧಿ ಅನುದಾನದಲ್ಲಿ 10 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿ, ಇಂದು ಮನೆಯನ್ನು ನಡೆಸಲು ದುಡಿಮೆ ಅಗತ್ಯವಿದೆ. ಇದರಿಂದ ಮಹಿಳೆಯರು ಮನೆಯಲ್ಲಿಯೇ ತಮ್ಮ ಕೈಲಾದ ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡು ಅದರಲ್ಲಿ ಬರುವ ಆದಾಯದಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.

ಜಿಪಂ ಸದಸ್ಯ ಎಂ. ಕೋಟೇಶ್ವರರೆಡ್ಡಿ, ತಾಪಂ ಅಧ್ಯಕ್ಷೆ ದೇವಮ್ಮ ಪಕ್ಕೀರಪ್ಪ, ಉಪಾಧ್ಯಕ್ಷೆ ಅಂಜಿನಮ್ಮ ತಿಮ್ಮಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವೈ. ಶಂಕ್ರಪ್ಪ, ತಾಪಂ ಇ.ಒ. ಶಿವಪ್ಪ ಸುಬೇದಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next