ಶಿರಸಿ: ಬಹುಮುಖ ಬಾಲ ಪ್ರತಿಭೆ ಮಾಸ್ಟರ್ ಅದ್ವೈತ ಕಿರಣಕುಮಾರ ಕುಡಾಳಕರ ಅಗಷ್ಟ್ 14ರಂದು ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ 75ನೇ ಸ್ವಾತ್ರಂತ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಮೂಲಕ ರಾಷ್ಟ್ರಗೀತೆ ಜನಗಣಮನವನ್ನು 75 ಬಾರಿ ತಡೆರಹಿತ ಒಂದು ತಾಸು ಎಂಟು ನಿಮಿಷದಲ್ಲಿ ನುಡಿಸಿದ್ದು, ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ ಹಾಗೂ ಏಷ್ಯಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿದೆ.
ನಗರದ ಸೆಂಟ್ ಅಂಥೋನಿ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಶಿರಸಿಯ ವಿದ್ವಾನ ಶ್ರೀರಂಗ ಹೆಗಡೆಯವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾನೆ.
ನಗರದಲ್ಲಿ ಆಯೋಜಿಸಿದ ಕನ್ನಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾ. ಅದ್ವೈತ ನಿಗೆ ಈ ಎರಡೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸ್ಪಂದನಾ ಸಂಸ್ಥೆಯಿಂದ ಕಿರಿಯ ಅಪ್ರತಿಮ ಸಾಧನಾ ಪುರಸ್ಕಾರಕ್ಕೂ ಮಾಸ್ಟರ್ ಅದ್ವೈತ ಭಾಜನನಾಗಿರುತ್ತಾನೆ ಎಂಬುದು ಉಲ್ಲೇಖನೀಯ.
ಈ ಸಾಧಕ ಬಾಲಕ ಪಯಣ ಪ್ರವಾಸೋದ್ಯಮ ಸಂಸ್ಥೆ ಹಾಗೂ ಅದ್ವೈತ ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷ ಕಿರಣ ಕುಮಾರ ಹಾಗೂ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರ ನಿರೀಕ್ಷಕಿ ಅರ್ಚನಾ ಪಾವಸ್ಕರ್ ಅವರ ಪುತ್ರ.