Advertisement

Sirsi: ಪಕ್ಷದಲ್ಲಿ ಶುದ್ಧೀಕರಣ ಚರ್ಚೆಯ ಬಳಿಕ ಬಿಜೆಪಿಗೆ ಹೋಗುವೆ: ಕೆ.ಎಸ್.ಈಶ್ವರಪ್ಪ 

05:33 PM Sep 13, 2024 | Team Udayavani |

ಶಿರಸಿ: ಬಿಜೆಪಿ‌ ನಮ್ಮ ತಾಯಿ, ಅದರ ಶುದ್ಧೀಕರಣಕ್ಕೆ ಹೊರ ಬಂದಿದ್ದೇನೆ. ಮತ್ತೆ  ಇದರ ಬಗ್ಗೆ ಚರ್ಚೆಯಾದ ಬಳಿಕ ಬಿಜೆಪಿಗೆ ಹೋಗುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ‌ ಮಾತನಾಡಿ ಸೈದ್ದಾಂತಿಕ ನಿಲುವು ಇದ್ದರೆ ಪಕ್ಷದ (ಬಿಜೆಪಿ) ಸಂಘಟನೆಗೆ ಒಳಿತು. ವೈಯಕ್ತಿಕ ನಿಲುವೇ ಹೆಚ್ಚಾದರೆ ಸಂಕಷ್ಟ. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ‌ ಎಂದು ಪ್ರಧಾನಿ ಮೋದಿ ಅವರು ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ಆಗಿದ್ದೇನು? ಎಂದು ಪ್ರಶ್ನಿಸಿದರು.

ಹಿಂದೂ ಸಮಾಜ‌ ಒಟ್ಟಾಗುವ ತನಕ ಕೆಲವು ಗೂಂಡ ಮನಸ್ಥಿತಿಯ ಮುಸ್ಲಿಂರಿಗೆ ಹೆದರಿಕೆ ಇರುವುದಿಲ್ಲ. ದೇವರ ಮೇಲೆ‌ ನಂಬಿಕೆಯೇ ಇಲ್ಲದ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿ ದರ್ಶನ ಪದೇ ಪದೇ ಮಾಡುವುದೇಕೆ? ಅವರ ಪತ್ನಿ ವಿನಾಕಾರಣ ವಿವಾದಕ್ಕೆ ಸಿಕ್ಕಿಬಿದ್ದ  ಬಗ್ಗೆ ಬೇಸರ ಇದೆ ಎಂದರು.

ಡಿ.ಕೆ.ಶಿವಕುಮಾರ ಅವರೂ ಕುಟುಂಬ ಸಹಿತ ವೈಷ್ಣೋ ದೇವಿ‌ ದರ್ಶನಕೆ ಹೋಗಿದ್ದಾರೆ. ಹಿಂದುತ್ವ‌ ಬಿಟ್ಟರೆ ನಾಯಕತ್ವ ಇಲ್ಲ ಎಂದರು. ಸಿದ್ದರಾಮಯ್ಯ ಟೀಂ ಎಂಥ ಪರಿಸ್ಥಿತಿ ಬಂದ್ರೂ ರಾಜೀನಾಮೆ ಕೊಡಲ್ಲ ಎನ್ನುತ್ತದೆ. ಸಂವಿಧಾನಕ್ಕೆ ಗೌರವ ಕೊಡುವುದಾಗಿ ಹೇಳಿ ಪ್ರಮಾಣವಚನ ಪಡೆದವರು ಕೋರ್ಟ್‌ ತೀರ್ಪಿಗೆ ಬದ್ಧ ಇರಬೇಕು. ಇಂತಹ ಹಟಗಳೇ ಕಾಂಗ್ರೆಸ್ ಗೆ‌ ಶಿಕ್ಷೆ ಕೊಡುತ್ತವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.