Advertisement

Kumata: ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ; ನಾಲ್ವರ ಬಂಧನ

10:14 PM Sep 14, 2024 | Team Udayavani |

ಕುಮಟಾ: ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಪಿಎಂಸಿ ಬಳಿ ನಡೆದಿದೆ.

Advertisement

ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳದ ಪಾಲಕ್ಕಾಡ್‌ ಎಂಬಲ್ಲಿಗೆ ಎಮ್ಮೆಗಳನ್ನು ವಧಿಸುವ ದೃಷ್ಟಿಯಿಂದ ಕೊಂಡೊಯ್ಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕುಮಟಾ ಪೊಲೀಸರು ದಾಳಿ ನಡೆಸಿ ನಾಲ್ವರ ಬಂಧಿಸಿದ್ದಾರೆ.

ಬಂಧಿತರು ಮೈಸೂರಿನ ಅಯೂಬ್ ಅಹಮದ್ ರಶೀದ್ (35), ಕೇರಳ ಕಾಸರಗೋಡಿನ ಅಬೂಬಕ್ಕರ್ ಮಹಮ್ಮದ್ (53), ಅಬ್ದುಲ್ ರೆಹಮಾನ್ ಪಲ್ಲಿಯನ್ (60) ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರದ ಅಜಗ‌ರ್ ಹುಸೈನ್ ಇಶ್ರತ್ ಹುಸೈನ್ (32) ಎನ್ನುವವರಾಗಿದ್ದು ಲಾರಿ ಸಹಿತ ಜಾನುವಾರುಗಳ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next