Advertisement

Hubballi: ಕ್ಷುಲ್ಲಕ ಕಾರಣಕ್ಕೆ ತಲ್ವಾರ್‌ನಿಂದ ಹೊಡೆದಾಡಿಕೊಂಡ ಸ್ನೇಹಿತರು; ಓರ್ವ ಗಂಭೀರ

02:12 PM Sep 08, 2024 | Team Udayavani |

ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ಸ್ನೇಹಿತರಿಬ್ಬರು ಪರಸ್ಪರ ತಲ್ವಾರ್‌ನಿಂದ ಹೊಡೆದಾಡಿಕೊಂಡ ಘಟನೆ ಶನಿವಾರ ಸಂಜೆ ತಾಲೂಕಿನ ವರೂರ ಬಳಿ ನಡೆದಿದ್ದು, ಈ ವೇಳೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

Advertisement

ಘಟನೆಯಲ್ಲಿ ತಾಲೂಕಿನ ಬಿ. ಅರಳಿಕಟ್ಟಿ ಗ್ರಾಮದವರಾದ ಜುಬೇರ ಮಲ್ಲಂಗಣ್ಣವರ ಹಾಗೂ ಬಿಡನಾಳ ಮೂಲದ ಫಕ್ರುದ್ದೀನ ಮುಲ್ಲಾನವರ ಗಾಯಗೊಂಡಿದ್ದಾರೆ.

ಹಣಕಾಸಿನ ವಿಷಯವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಅಲ್ಲದೆ ನನ್ನ ಹೆಂಡತಿ ನನ್ನಿಂದ ದೂರವಾಗಲು ನೀನೆ ಕಾರಣವೆಂದು ಫಕ್ರುದ್ದೀನನು ಜುಬೇರ ಜೊತೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಅದು ವಿಕೋಪಕ್ಕೆ ಹೋದಾಗ ತಲ್ವಾರ್ ತೆಗೆದುಕೊಂಡು ಬಂದಿದ್ದ ಫಕ್ರುದ್ದೀನನು ಜುಬೇರ ಮೇಲೆ ಕೈಗೆ ಹಲ್ಲೆ ಮಾಡಿದ್ದಾನೆ.‌ ಆಗ‌ ಜುಬೇರನು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಅದೇ ತಲ್ವಾರ್‌ನಿಂದ ಫಕ್ರುದ್ದೀನಗೆ ತಲೆ ಮತ್ತು ‌ಮುಖಕ್ಕೆ ಹೊಡೆದು ಗಾಯಗೊಳಿಸಿದ್ದಾನೆ.

ಜುಬೇರನನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದು, ತೀವ್ರ ಗಾಯಗೊಂಡಿರುವ ಫಕ್ರುದ್ದೀನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.‌ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.