Advertisement

Sirsi: ರಾಜ್ಯ ಮಟ್ಟದ ಪ್ರಾಥಮಿಕ-ಪ್ರೌಢ ಶಾಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಚಾಲನೆ

07:55 PM Dec 05, 2023 | Team Udayavani |

ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದ ಮೂರು ದಿನಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

Advertisement

ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ನಿರಂತರ‌ ಸಾಧನೆ ಮಾಡಿದರೆ ಗೆಲ್ಲಲು ಸಾಧ್ಯ. ಪಠ್ಯದಷ್ಟೇ ಪಠ್ಯೇತರಕ್ಕೆ ಮಹತ್ವ ನೀಡಬೇಕು. ಶಿಕ್ಷಣ, ಕ್ರೀಡೆ ಸಮ‌ಸಮವಾಗಿ ಮಕ್ಕಳಿಗೆ ಸಿಗಬೇಕು ಎಂದರು.

ಸಹಾಯಕ ಆಯುಕ್ತ ದೇವರಾಜ್ ಆರ್, ಸೋಲೆ ಗೆಲುವಿನ ಮೆಟ್ಟಿಲು ಆಗುತ್ತದೆ. ಸ್ಪರ್ಧಾತ್ಮಕ ದೃಷ್ಟಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದರು.

ಡಿಡಿಪಿಐ ಪಿ.ಬಸವರಾಜ, ತಹಸೀಲ್ದಾರ ಶ್ರೀಧರ ಮುಂದಲಮನಿ, ಬಿಇಓ ನಾಗರಾಜ ನಾಯ್ಕ, ಎಂ.ಎಸ್. ಹೆಗಡೆ, ಇಓ ಸತೀಶ ಹೆಗಡೆ, ಕಿರಣ ನಾಯ್ಕ, ಕಾಸಿಂ ಸಾಬ್, ಪ್ರದೀಪ ಶೆಟ್ಟಿ ಇತರರು ಇದ್ದರು‌.

Advertisement

ಇದಕ್ಕೂ‌ ಮೊದಲು ಮಹಿಮಾ ಯಜ್ಞೇಶ್ವರ ನಾಯ್ಕ, ರಚನಾ ಮಂಜುನಾಥ ನಾಯಕ ಅವರಿಂದ ಯಕ್ಷ ನೃತ್ಯ ಗಮನ‌ ಸೆಳೆಯಿತು. ಕೆ.ಎಚ್.ಶ್ರೀಧರ, ರೇಣುಕಾ ಬಾಳೆಹಿಸೂರ ಕಾರ್ಯಕ್ರಮ ನಿರ್ವಹಿಸಿದರು.

ಮೂರು ದಿನಗಳ ಕಾಲ ಎರಡು ಕಡೆ ಸ್ಪರ್ಧೆ ನಡೆಯುವ ಸ್ಪರ್ಧೆಯಲ್ಲಿ 150 ನಿರ್ಣಾಯಕರು, 130 ತಂಡದ ವ್ಯವಸ್ಥಾಪಕರು ಪಾಲ್ಗೊಂಡಿದ್ದು, 140 ತಂಡಗಳಿಂದ 650 ಕ್ಕೂ ಅಧಿಕ ಆಟಗಾರರು ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಆನೆಗುಡ್ಡೆ: ರಾಜ್ಯ ಮಟ್ಟದ ಕುಣಿತ ಭಜನ ಸ್ಪರ್ಧೆ ಫಲಿತಾಂಶ

Advertisement

Udayavani is now on Telegram. Click here to join our channel and stay updated with the latest news.

Next