Advertisement

Sirsi: ಕೊನೆಗೂ ಈಡೇರಿತು ಸರಕಾರಿ ನೌಕರರ ಪ್ರತ್ಯೇಕ ಜಿಲ್ಲಾ ಶಾಖೆ ಬೇಡಿಕೆ; ಕಿರಣ್

02:59 PM Jan 16, 2024 | Team Udayavani |

ಶಿರಸಿ: ಕಳೆದ ಆರೇಳು ವರ್ಷಗಳಿಂದ ಉತ್ತರ ಕನ್ನಡದ ಘಟ್ಟದ ಮೇಲಿನ ತಾಲೂಕುಗಳಿಗೆ ಸಂಬಂಧಿಸಿ ಪ್ರತ್ಯೇಕ ಜಿಲ್ಲಾ ಶಾಖೆ ಘೋಷಿಸುವಂತೆ ಒತ್ತಾಯಿಸಿದ್ದ ಸರಕಾರಿ ನೌಕರರ ಬೇಡಿಕೆ ಅಂತೂ ಈಡೇರಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಸಿ ತಾಲೂಕಿನ ಶಾಖೆ ಮಂಗಳವಾರದಿಂದ ಜಿಲ್ಲಾ ಶಾಖೆಯಾಗಿ ಪರಿವರ್ತನೆಗೊಂಡಿದೆ.

Advertisement

ಈ ಕುರಿತು ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಆದೇಶ ಪತ್ರವನ್ನು ನೂತನ ಶಿರಸಿ ಜಿಲ್ಲಾ ಘಟ್ಟಕದ ಪ್ರಥಮ ಅಧ್ಯಕ್ಷ ಕಿರಣಕುಮಾರ ನಾಯ್ಕ ಅವರಿಗೆ ಹಸ್ತಾಂತರಿಸಿದರು.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ ಒಳಗೊಂಡ ಶಿರಸಿ ಜಿಲ್ಲಾ ಘಟಕದ ನೂತನ ಜಿಲ್ಲಾ ಖಜಾಂಚಿಯಾಗಿ ಜಯದೇವ ಮತ್ತೂರು, ಕಾರ್ಯದರ್ಶಿಯಾಗಿ ವಸಂತ್ ನಾಯ್ಕ, ರಾಜ್ಯ ಪರಿಷತ್‌ಗೆ ಅಶೋಕ್ ಪಡುವಳ್ಳಿ ಆಯ್ಕೆ ಆದೇಶ ನೀಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜುಜೆ ಫರ್ನಾಂಡಿಸ್, ಸಂಘಟನಾ ಕಾರ್ಯದರ್ಶಿ ಹರೀಶ್ ನಾಯಕ್ ಉಪಸ್ಥಿತರಿದ್ದರು. ಈ ವೇಳೆ ಹರ್ಷ ವ್ಯಕ್ತಪಡಿಸಿದ ಕಿರಣ್, ನಮ್ಮ ಬೇಡಿಕೆಗೆ ರಾಜ್ಯ ಸಂಘ ಬಲ ನೀಡಿದ್ದು, ಇದಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವದಾಗಿ ಹೇಳಿದ್ದಾರೆ.

ಇದನ್ನೂ ಓದಿ: ನಟನೆ ಜೊತೆ ನಿರ್ದೇಶನದಲ್ಲೂ ಬ್ಯುಸಿಯಾದ ಧನುಷ್; ನಿರ್ದೇಶನದ‌ 2 ಸಿನಿಮಾ ಇದೇ ವರ್ಷ ತೆರೆಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next