ಶಿರಸಿ: ಯಾರೂ ಯಾರಿಗೂ, ಯಾವತ್ತೂ ಪ್ಲೀಸ್ ಎಂಬುದನ್ನು ಮಾಡಬಾರದು. ಬದಲಿಗೆ ಪ್ರತಿಯೊಬ್ಬರನ್ನು ಪ್ರೀತಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ನಗರದ ಹೊರ ವಲಯದ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಯಲ್ಲಿ ಆಶೀರ್ವಚನ ನುಡಿದರು.
ಎಲ್ಲರೂ ಸಾಧ್ಯವಾದಷ್ಟು ಸಂತೋಷವಾಗಿರಬೇಕು. ಇದು ಆರೋಗ್ಯದ ಮೊದಲ ಸೂತ್ರ. ನನ್ನಿಂದಲೇ ಎಲ್ಲ ಎಂದಾಗ ರೋಗಗಳು ಬರುತ್ತವೆ. ನಾ ಎನ್ನುವ ಅಹಂಕಾರ ತೆಗೆಯಬೇಕು. ಅಹಂಕಾರ ಬಂದರೆ ಅದರಷ್ಟು ಅಪಾಯಕಾರಿ ಬೇರೆ ಇಲ್ಲ ಎಂದರು.
ಯಾರೇ ಆದರೂ ಇದ್ದಿದ್ದನ್ನು ಇದ್ದಂತೆ ಹೇಳಿದರೆ ದೇಶದ ಸತ್ ಪ್ರಜೆಯಾಗಲು ಸಾಧ್ಯವಿದೆ. ವಿದೇಶಿ ಸಂಸ್ಕೃತಿಗೆ ಮೊರೆ ಹೋಗಬಾರದು. ದೇಶೀಯ ನೆಲದ ಕಲೆ, ಸಂಸ್ಕೃತಿ ಎಲ್ಲ ಬೆಳೆಸಬೇಕು, ಬಲಗೊಳ್ಳಬೇಕಿದೆ ಎಂದರು.
ನಿಸರ್ಗ ಮನೆಯ ಡಾ. ವೆಂಕಟ್ರಮಣ ಹೆಗಡೆ ನನ್ನ ಬೆನ್ನು ನೋವಿನ ಸಮಸ್ಯೆ ನಿವಾರಿಸಿ ಕೊಟ್ಟವರು. ಅವರು ನೀಡುವ ಆರೋಗ್ಯ ಸೂತ್ರಗಳು ಬದುಕಿಗೆ ಹಿತ ಎಂದರು.
ಈ ವೇಳೆ ಪ್ರಸಿದ್ದ ವಾಸ್ತು ತಜ್ಞ ಶ್ರೀಧರ ಪರಮಾಳಾಚಾರ್, ಡಾ. ವೆಂಕಟರಮಣ ಹೆಗಡೆ ಇತರರು ಇದ್ದರು. ಬಳಿಕ ಪ್ರದರ್ಶನ ಕಂಡ ತುಳಸಿ ಹೆಗಡೆ ಪ್ರಸ್ತುತಿಯ ಲೀಲಾವತಾರಂ ರೂಪಕದ ಕುರಿತು ಶ್ಲಾಘಿಸಿದರು.
ಈ ವೇಳೆ ಪ್ರಸಿದ್ದ ವಾಸ್ತು ತಜ್ಞ ಶ್ರೀಧರ ಪರಮಾಳಾಚಾರ್, ಡಾ. ವೆಂಕಟರಮಣ ಹೆಗಡೆ, ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಇತರರು ಇದ್ದರು.
ಮತದಾನ ಅತ್ಯಂತ ಪವಿತ್ರ ಕಾರ್ಯ. ಮತದಾನದಿಂದ ಯಾರೂ ದೂರ ಉಳಿಯಬಾರದು. –
ಹುಕ್ಕೇರಿ ಹಿರೇಮಠ ಶ್ರೀ