Advertisement

Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ‌ ನಾಯ್ಕ

12:42 PM Sep 30, 2024 | Team Udayavani |

ಶಿರಸಿ: ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ರಾಜ್ಯ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿದ್ದು, ಜನರ ಜೀವನಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡ ಸಹಮತ ನೀಡಬೇಕು. ಇದಕ್ಕಾಗಿ ರಾಜ್ಯದ ಹತ್ತು‌ ಜಿಲ್ಲೆಗಳ ಸಂಸದರಿಗೆ ನಾನೂ ಪತ್ರ ಬರೆದು ಒತ್ತಾಯಿಸುವದಾಗಿ ಶಾಸಕ ಭೀಮಣ್ಣ‌ ನಾಯ್ಕ ಹೇಳಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಗೆ ನಡೆಸಲಾದ ಸಮೀಕ್ಷೆಯೇ ಸಮರ್ಪಕವಾಗಿಲ್ಲ. ವಾಸ್ತವವಾಗಿ ಹಳ್ಳಿಗಳಿಗೆ ತೆರಳಿ ಇಲ್ಲಿಯ ಸ್ಥಿತಿಗತಿ ಸಮೀಕ್ಷೆ ನಡೆಸದೇ ಉಪಗ್ರಹ ಆಧಾರಿತ ಚಿತ್ರ ಬಳಸಿ ಜಾಗ ಗುರುತಿಸಲಾಗಿದೆ. ಇದರಿಂದಾಗಿ ಶಿರಸಿ ತಾಲೂಕಿನ 29 ಗ್ರಾಮ ಪಂಚಾಯಿತಿಗಳು, ಸಿದ್ದಾಪುರ ತಾಲೂಕಿನ 26 ಗ್ರಾಮ ಪಂಚಾಯಿತಿಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುತ್ತಿವೆ. ಈ ಬಗ್ಗೆ ರವೀಂದ್ರ ನಾಯ್ಕ ಅವರೂ ಹೋರಾಟ ಮಾಡಿದ್ದಾರೆ. ನಾನೂ ಶಾಸಕನಾಗಿ ಶಾಸನ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆ. ಈಗ ರಾಜ್ಯ ಸರಕಾರ ಇದನ್ನು ತಿರಸ್ಕರಿಸಿದೆ. ಕೇಂದ್ರ ಸರಕಾರ ಇದನ್ನು ಒಪ್ಪುವಂತೆ ಸಂಸದರು ಮಾಡಬೇಕಿದೆ ಎಂದರು.

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಉಳಿಯಬೇಕು. ಈಗಾಗಲೇ ಇರುವ ಕಾನೂನು, ನೀತಿ ನಿಯಮದಿಂದ ಕಾಡನ್ನು ಅನಾದಿಕಾಲದಿಂದಲೂ ಉಳಿಸಿಕೊಂಡು ಬರಲಾಗಿದೆ. ಮತ್ತೆ ಕಸ್ತೂರಿ ರಂಗನ್ ವರದಿ ಹೇರಿಕೆಯಿಂದ ಸಮಸ್ಯೆ ಆರಂಭವಾಗಲಿದೆ ಹೊರತೂ ಬೇರಾವ ಪ್ರಯೋಜನವಾಗುವುದಿಲ್ಲ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಎಸ್.ಕೆ. ಭಾಗ್ವತ್, ಅಬ್ಬಾಸ್ ತೋನಸೆ ಇತರರು ಇದ್ದರು.

ಇದನ್ನೂ ಓದಿ: Mudhol: ಸಭೆಗೆ ತಡವಾಗಿ ಬಂದ ಉಸ್ತುವಾರಿ ಸಚಿವರು… ಸಭೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next