Advertisement

Sirsi: ಉಪ ನೊಂದಣಿ ಕಚೇರಿಗೆ ಡಿಸಿ ದಿಢೀರ್ ಭೇಟಿ!

09:22 PM Aug 01, 2023 | Team Udayavani |

ಶಿರಸಿ: ಇಲ್ಲಿನ ಉಪ ನೊಂದಣಿ ಕಚೇರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.

Advertisement

ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಾಲ್ಕೇ ದಿನದಲ್ಲಿ ಎರಡನೇ ಸಲ ಶಿರಸಿಗೆ ಆಗಮಿಸಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಉಪ ನೊಂದಣಿ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲಾಖೆಯ ಹಿರಿಯ ಅಧಿಕಾರಿಗಳು ಹೇಳದೇ ರಜೆ ಹಾಕುತ್ತಾರೆ, ಸಮಯಕ್ಕೆ ಬರುವುದಿಲ್ಲ ಎಂಬ ದೂರನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದರು. ಈ ಹಿಂದೆ ಉಪ ವಿಭಾಗದ ಅಧಿಕಾರಿಗಳ ಗಮನಕ್ಕೂ ಸಮಸ್ಯೆಯನ್ನು ಜನರೇ ತೋಡಕೊಂಡಿದ್ದರು. ಆದರೂ ಸಮಸ್ಯೆ ಇತ್ಯರ್ಥ ಆಗಿರಲಿಲ್ಲ. ಇದರಿಂದ ಸ್ವತಃ ಡಿಸಿ ಅವರೇ ನೊಂದಣಿ ಕಚೇರಿಗೆ ತೆರಳಿ ಪರಿಶೀಲಿಸಿ, ಇನ್ನು ಮುಂದೆ ದೂರು ಬಾರದಂತೆ ನೋಡಿಕೊಳ್ಳಬೇಕು. ಕಡತ ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ಈ ಮಧ್ಯೆ ಪ್ರಕೃತಿ ವಿಕೋಪಗಳಿಂದ ಸಾರ್ವಜನಿಕ ಸಂಪರ್ಕ ರಸ್ತೆ, ಶಾಲೆ, ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರಗಳಿಗೆ ಸುವ್ಯವಸ್ಥೆ ಕಲ್ಪಿಸುವ ಕುರಿತು ಜಿಲ್ಲಾ ಮಟ್ಟದ, ಉಪವಿಭಾಗ ಮಟ್ಟದ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕೂಡ ನಡೆಸಿದರು. ನಂತರ ಆಹಾರ ವಿಭಾಗಕ್ಕೆ ಭೇಟಿ ನೀಡಿ ಗೃಹಲಕ್ಷಿ ಯೋಜನೆ ಹಿನ್ನಲೆ ಸಾರ್ವಜನಿಕರು ಕಛೇರಿಗೆ ಬರುತ್ತಿರುವ ಕುರಿತು ಸಿಬ್ಬಂದಿಗಳಿಗೆ ವಿಚಾರಿಸಿದರು.

ತಾಲೂಕು ಪಂಡಿತ್ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಹಾಗೂ ಆಸ್ಪತ್ರೆಯಲ್ಲಿ ನೀಡುವ ಸೌಲಭ್ಯಗಳು ಹಾಗೂ ಸೌಕರ್ಯಗಳ ಕುರಿತು ವಿಚಾರಿಸಿದರು. ಈ ವೇಳೆ ಎಸಿ ಆರ್.ದೇವರಾಜ್, ತಹಸೀಲ್ದಾರ ಶ್ರೀಧರ ಮುಂದಲಮನಿ, ಶ್ರೀಕೃಷ್ಣ ಕಾಮಕರ್ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next