Advertisement

Sirsi ವಿಜ್ಞಾನ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆಗೆ ಮನವಿ

04:13 PM Oct 09, 2024 | Team Udayavani |

ಶಿರಸಿ: ವಿಜ್ಞಾನ ಪ್ರಶ್ನೆಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆ ತರುವಂತೆ ಪ್ರೌಢ ಶಾಲಾ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಸಂಘದಿಂದ ಮನವಿ ನೀಡಲಾಯಿತು.

Advertisement

ಡಿಡಿಪಿಐ ಬಸವರಾಜ್ ಪಾರಿ ಅವರ ಮೂಲಕ ಅ.9ರ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ವಿಜ್ಞಾನದ ಗುಣಾತ್ಮಕ ಫಲಿತಾಂಶ ಕೆಳ ಮುಖವಾಗುತ್ತಿದೆ. ಹೀಗಾಗಿ ಸೂಕ್ತ ಬದಲಾವಣೆ ಅಗತ್ಯವಾಗಿದೆ. ಪಠ್ಯ ಪುಸ್ತಕದಲ್ಲಿ ಭೌತ, ಜೀವ, ರಸಾಯನ ಶಾಸ್ತ್ರಗಳ ವಿಂಗಡನೆ ಇಲ್ಲದಿದ್ದರೂ ಪ್ರಶ್ನೆ ಪತ್ರಿಕೆಯಲ್ಲಿ ವಿಭಾಗವಾರು ವಿಂಗಡನೆ ಆಗುತ್ತಿದೆ. ಭೌತಶಾಸ್ತ್ರ ಪ್ರಥಮವಾಗಿ ಆಯ್ಕೆ ಮಾಡಿರುವುದರಿಂದ ಅಲ್ಲಿನ ಪ್ರಶ್ನೆಗಳ ಕಠಿಣತೆ ಹೆಚ್ಚಿದೆ. ನೀಲ ನಕ್ಷೆಯಲ್ಲಿ ಘಟಕಗಳ ಬದಲಾಗಿ ಮುಖ್ಯಾಂಶಗಳಿಗೆ ಆದ್ಯತೆ‌ ನೀಡುತ್ತಿರುವುದು, ಕೌಶಲದಲ್ಲಿ ಚಿತ್ರಗಳ ಬಿಡಿಸುವ ಪ್ರಶ್ನೆಗಳ ಬದಲಾಗಿ ಚಿತ್ರಗಳಾಧಾರಿತ ಪ್ರಶ್ನೆ ಹೆಚ್ಚುತ್ತಾ ಇರುವುದು, ಸಿಬಿಎಸ್ ಮಾದರಿ‌ ಪ್ರಶ್ನೆಗಳನ್ನೇ ಇಲ್ಲಿ ಕೇಳುತ್ತಿರುವುದರಿಂದ ಗ್ರಾಮೀಣ ಭಾಗದ ಮಕ್ಕಳ‌ ಮಾನಸಿಕತೆ ಕುಸಿದಿದೆ ಸೇರಿದಂತೆ 15ಕ್ಕೂ ಅಧಿಕ ಉದಾಹರಣೆ ಹಾಗೂ ಬದಲಾವಣೆ ಸಲಹೆ ಸಹಿತ ಮನವಿ ನೀಡಲಾಯಿತು.

ಈ ವೇಳೆ ಅಧ್ಯಕ್ಷ ಅಜಯ ನಾಯಕ, ಎಂ.ರಾಜಶೇಖರ್, ಸದಾನಂದ ದಬಗಾರ್,  ಶೈಲೇಂದ್ರ ಎಂ.ಹೆಗಡೆ, ಕವಿತಾ ಶೆಟ್, ಜಯಲಕ್ಷ್ಮಿ ಗುನಗಾ , ನಾಗರಾಜ ಪಂಡಿತ್,  ತನುಜಾ ನಾಯ್ಕ, ಗಜಾನನ ಭಟ್, ನಯನಾ ಭಂಡಾರಿ, ಚೈತ್ರಾ, ಜಯಲಕ್ಷ್ಮಿ ಹೆಗಡೆ, ರವಿಕಲಾ ನಾಯ್ಕ ಹನುಮಂತಪ್ಪ ಎಸ್.ಆರ್, ವಾಣಿ ಹೆಗಡೆ, ಪ್ರಿಯಾ ಗೌಡರ್, ಸುಬ್ರಹ್ಮಣ್ಯ ಗೌಡ,ಮೋಹನ್ ನಾಯ್ಕ, ರೀನಾ ನಾಯಕ, ಗಾಯತ್ರಿ ನಾಯಕ, ಜ್ಯೋತಿ ಪೆಡ್ನೆಕರ್ ಸೇರಿದಂತೆ ಅನೇಕ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next