Advertisement

ಸಿರಿಗೇರಿ:ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆ

04:38 PM Jun 20, 2020 | Naveen |

ಕುರುಗೋಡು: ಸಿರಿಗೇರಿ ಗ್ರಾಮದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸುರಕ್ಷತೆಗಾಗಿ ಜಾಗೃತಿ ಹಾಗೂ ಶಾಲಾ ಪ್ರಾರಂಭಿಸಲು ಪೋಷಕರ ಮತ್ತು ಎಸ್‌ಡಿಎಂಸಿ ಸಮಿತಿ ಸಮಕ್ಷಮದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

Advertisement

ಇದೇ ವೇಳೆ ಶಾಲೆ ಮುಖ್ಯಗುರು ಆರ್‌. ಪರ್ವಿಜ್‌ ಅಹಮ್ಮದ್‌ ಮಾತನಾಡಿ, ಪರೀಕ್ಷೆ ವೇಳಾ ಪಟ್ಟಿಯಂತೆ ಬೆಳಗ್ಗೆ 10.30ಕ್ಕೆ ಬರದೇ ಎರಡು ಗಂಟೆಗಳ ಕಾಲ ಮುಂಚಿತವಾಗಿ ಶಾಲೆಗೆ ಬಂದು ಸಾಮಾಜಿಕ ಅಂತರ ಇನ್ನಿತರೆ ವ್ಯವಸ್ಥೆಗಳೊಂದಿಗೆ ಪರೀಕ್ಷೆಗೆ ಬರೆಯಲು ಮುಂದಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶಾನವಾಸಪುರ, ಸಿರಿಗೇರಿ ಕ್ರಾಸ್‌, ಕೊಂಚಿಗೇರಿ, ದಾಸಪುರ ಗ್ರಾಮದ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಗೆ ಬರಲು ಬಸ್‌ ಬಿಡುವಂತೆ ಡಿಪೋ ಘಟಕದ ಅಧಿಕಾರಿಗಳಿಗೆ ಮತ್ತು ಶಿಕ್ಷಣಾಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಯಾವುದೇ ಪಾಸ್‌ ಇಲ್ಲದ್ದಿದ್ದರೂ ಪರೀಕ್ಷಾ ಪ್ರವೇಶ ಪತ್ರ ತೋರಿಸಿದರೆ ಅನುಮತಿ ದೊರಕುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಎಸ್‌.ಎಂ. ನಾಗರಾಜ ಸ್ವಾಮಿ, ಶಿಕ್ಷಕರಾದ ನೆಮುನ್ನಿಸಾ,ಶಿವಲೀಲಾ, ರಂಗಪ್ಪ, ಕವಿತಾ, ಎರಿಯಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next