Advertisement
ಹಿಮ ಮಿಶ್ರಿತ ಮಳೆಯಲ್ಲೇ ನಡುಗುತ್ತಾ ರಂಗಮಂದಿರದ ಬಾಗಿಲಿಗೆ ತಲುಪಿದ ಆಯೋಜಕರು ಹಬ್ಬಕ್ಕೆ ಬರುವವರನ್ನು ಸಂತೋಷದಿಂದ ಬರಮಾಡಿಕೊಳ್ಳಲು, ನೋಂದಾಯಿತ ಸದಸ್ಯರನ್ನು ಗುರುತಿಸಲು ಸುಸಜ್ಜಿತ QR ಕೋಡ್ ಬಳಸಿ ಬಂದವರಿಗೆ ಬಣ್ಣದ ಕಂಕಣ ತೊಡಿಸಿ ಸ್ವಾಗತಿಸಿದರು.
Related Articles
Advertisement
ಲಿಟಿಲ್ ಚಾಂಪಿಯನ್ ತಂಡದ 5 – 6 ವರ್ಷದ ಪುಟಾಣಿಗಳು ವಿವಿಧ ಹಾಡುಗಳಿಗೆ ಮು¨ªಾಗಿ ಹೆಜ್ಜೆ ಹಾಕಿ ಮನರಂಜಿಸಿದರು. ಸವಿರಾಗ ತಂಡದ 1 – 3ನೇ ತರಗತಿಯ ಮಕ್ಕಳು ಕೈವಾರ ಅಮರ ನಾರೇಯಣ ಅವರ ಶ್ರೀರಾಮ ಕೃತಿಯನ್ನು ಹಾಡಿ ಸಭಿಕರು ಚಪ್ಪಾಳೆ ತಟ್ಟುವಂತೆ ಮಾಡಿದರು. ಅನಂತರ ಬಂದ 3-6 ವರ್ಷದ ಪ್ರಚಂಡ ಪುಟಾಣಿಗಳ ಕುಣಿತ ನೋಡಿ ಎಲ್ಲರೂ ಬೆರಗಾದರು.
ಇದಾದ ಮೇಲೆ ಮ್ಯೂನಿಕ್ ಮಿನಿ ಮೂವರ್ಸ್ ತಂಡದ 8-10 ವರ್ಷದ ಮಕ್ಕಳು ಟಗರು ಇತ್ಯಾದಿ ಹಾಡುಗಳ ಹೆಜ್ಜೆಗೆ ಜನರು ಮರುಳಾದರು. ಅನಂತರ ಬಂದ ಲಘು ಸಂಗೀತದ ತಂಡ ಕೇಳುಗರಿಗೆ ಸವಿ ಬಡಿಸಿದರು. ಭರತ ನಾಟ್ಯ ಹಾಗೂ ಕುಚ್ಚಿಪುಡಿ ಜುಗಲ್ಬಂದಿ ನೃತ್ಯ ಪ್ರದರ್ಶಿದ ಗೋಪಿ ತರಂಗಮ್ ತಂಡದ 16 ತಿಂಗಳ ಪುಟ್ಟ ಕೃಷ್ಣ ಎಲ್ಲರ ಮನಸ್ಸನ್ನು ಕದ್ದ. ನಾಟ್ಯಾಂಜಲಿ ಜೂನಿಯರ್ ಮಕ್ಕಳು ಸುಂದರ ಶಾಸ್ತ್ರೀಯ ನೃತ್ಯ ಮಾಡಿ ಮನ ತಣಿಸಿದರು. ಕೊನೆಯದಾಗಿ ವಿಂಗ್ಸ್ ಆಫ್ ವಾದ್ಯ ಗುಂಪಿನಿಂದ ವೀಣಾ ಜುಗಲಬಂದಿ , ಕೊಳಲು ತಬಲಾ ಮತ್ತು ಮೃದಂಗಗಳ ಅದ್ಭುತ ಸಂಗೀತಕ್ಕೆ ತಕ್ಕಂತೆ ಧಿಡೀರ್ ಚಿತ್ರ ಬಿಡಿಸಿ ಸಭಿಕರನ್ನು ಬೆರಗು ಗೊಳಿಸಿದರು.
ಇತ್ತೀಚೆಗಷ್ಟೆ ನಮ್ಮನ್ನು ಅಗಲಿದ ಕನ್ನಡ ಚಿತ್ರರಂಗದ ನೆಚ್ಚಿನ ಹಿರಿಯ ನಟ, ಕರ್ನಾಟಕದ ಪ್ರಚಂಡ ಕುಳ್ಳ ಎಂದೇ ಪ್ರಖ್ಯಾತಿಯಾದ ದ್ವಾರಕೀಶ್ ಅವರನ್ನು ಸ್ಮರಿಸಿ ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ದಕ್ಷಿಣ ಜರ್ಮನಿ ಹೊಣೆ ಹೊತ್ತು ಭಾರತಕ್ಕಾಗಿ ಬಹಳಷ್ಟು ಕೆಲಸ ಮಾಡಿ ಸದ್ಯದಲ್ಲೇ ಬೇರೆಡೆಗೆ ವರ್ಗಾವಣೆ ಆಗಲಿರುವ ಮೋಹಿತ್ ಯಾದವ್ ಅವರ ಬಗ್ಗೆ ಒಂದು ಕಿರು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಅನಂತರ ಮ್ಯೂನಿಕ್ ನಗರದಲ್ಲಿ ನಮ್ಮ ಕೂಟಕ್ಕೆ ದೊರೆತ ಸಲಹೆ ಪ್ರೋತ್ಸಾಹಗಳನ್ನು ನೆನೆದು ಧನ್ಯವಾದಗಳನ್ನು ಸಲ್ಲಿಸಲಾಯಿತು.
ಈ ಬಾರಿ ಸಿರಿಗನ್ನಡ ಕೂಟದಿಂದ sustainability ವಿಷಯವನ್ನು ಆಧರಿಸಿ ಕಸದಿಂದ ರಸ ಸ್ಪರ್ಧೆ ಏರ್ಪಡಿಸಲಾಗಿತ್ತು, 4 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತ್ಯಾಜ್ಯವಾಗಿರುವ ವಸ್ತುಗಳಿಂದ ವಿಭಿನ್ನವಾಗಿ ದಿನಬಳಗೆ ಬೇಕಾಗುವ ಚಂದದ ವಸ್ತುಗಳನ್ನು ತಯಾರಿಸಿದರು. ಇವರಲ್ಲಿ ಮಾನಸ ಪುಟ್ಟಪ್ಪ ಮತ್ತು ತಂಡಕ್ಕೆ ದ್ವಿತೀಯ ಬಹುಮಾನ ಮತ್ತು ರೇಶ್ಮಾ ಮತ್ತು ತಂಡಕ್ಕೆ ಪ್ರಥಮ ಬಹುಮಾನದ ಭಾಜನರಾದರು. ಸ್ಪರ್ಧೆಯಲ್ಲಿ ಗೆದ್ದ ತಂಡಗಳಿಗೆ ಮೋಹಿತ್ ಯಾದವ್ ರವರು ಪ್ರಶಸ್ತಿಗಳನ್ನು ನೀಡಿ ಪ್ರಶಂಸಿದರು ಮತ್ತು ಸಿರಿಗನ್ನಡ ಕೂಟದ 2024ರ ಸಂಭ್ರಮ ನಾಮಾಂಕಿತ ಕರ್ನಾಟಕ ರಾಜ್ಯೋತ್ಸವಾಚರಣೆಯು ನವೆಂಬರ್ 17 ಎಂದು ವಿಶೇಷ ಕೌಂಟ್ ಡೌನ್ ವೀಡಿಯೋ ಮೂಲಕ ಘೋಷಿಸಿದರು.
ಯುಗಾದಿ ಅಂದರೆ ಒಬ್ಬಟ್ಟು ಸಿಹಿ ಊಟ ಇಲ್ಲದೇ ಇರುತ್ತದೆಯೇ? ಹಲವು ಬಗೆಯ ರುಚಿ ರುಚಿಯಾದ ಊಟ ಯುರೋಪ್ ನಲ್ಲಿರುವ ಜನಕ್ಕೆ ದೂರದ ನಮ್ಮ ಊರಿನ ನೆನಪು ಬರುವಂತೆ ಮಾಡಿತು. ಮಾವಿನ ಸೀಕರಣೆ ಸವಿದು ವೀಳ್ಯದ ಎಲೆ ಜಗಿದು ಮುಂದಿನ ಕಾರ್ಯಕ್ರಮಕ್ಕೆ ಎಲ್ಲರೂ ಸಜ್ಜಾದರು.
ಮಕ್ಕಳಿಗಾಗಿ ಅರವಿಂದ ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ರೇಶ್ಮಾ ಮೋರ್ಟು ಅವರು ಕನ್ನಡದಲ್ಲಿ ಭಾರತೀಯ ಕಾಲಮಾನಗಳ ಪರಿಚಯ ಮಾಡಿಸಿ ಯುಗಾದಿಯ ಕಥೆ ಹೇಳಿ, ರತ್ತೋ ರತ್ತೋ ಇತ್ಯಾದಿ ಊರ ಆಟಗಳನ್ನು ಆಡಿಸಿ ನಲಿಸಿದರು. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಸಹ ವೈಷ್ಣವಿ ಕುಲ್ಕರ್ಣಿ ಅವರ ಮೇಲುಸ್ತುವಾರಿಯಲ್ಲಿ ಮತ್ತು ಸ್ವಯಂ ಸೇವಾ ಕಾರ್ಯಕರ್ತರ ಸಹಕಾರದಲ್ಲಿ ಕವಡೆ, ಲಗೋರಿ, ಕುಂಟೆಬಿÇÉೆ ಆಟಗಳನ್ನು ಆಡಿಸಿ ಬಾಲ್ಯದ ನೆನಪುಗಳು ಹಸಿಯಾಗುವಂತೆ ಮಾಡಿದರು.ಬಗೆಬಗೆಯ ದೇಸಿ ತಿಂಡಿ ತಿನಿಸುಗಳು, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಇರಿಸಿದ್ದ ಸದಸ್ಯರು ಜನರ ಗಮನ ಸೆಳೆದಿದ್ದರು. ಕೂಟದ ಮೊದಲಿನ ಆಡಳಿತ ಮಂಡಳಿಯ ಸದಸ್ಯರು ತಮ್ಮ ಅನುಭವವನ್ನು ಮೆಲಕು ಹಾಕಿದರು, ಅವರ ಸೇವೆಯನ್ನು ನೆನೆದು ನೂತನ ಮಂಡಳಿಯ ಸದಸ್ಯರು ನೆನಪಿನ ಕಾಣಿಕೆಗಳನ್ನು ಕೊಟ್ಟು ವಂದಿಸಿದರು.
ಕಾರ್ಯಕ್ರಮ ಸುಗಮವಾಗಲು ದಣಿವೆನ್ನದೆ ಶ್ರಮಿಸಿದ ಕಾರ್ಯಕರ್ತರಿಗೆ ಆಡಳಿತ ಮಂಡಳಿ ಧನ್ಯವಾದ ತಿಳಿಸಿದರು. ವರದಿ – ಅರವಿಂದ ಬಾಯರಿ
ಚಿತ್ರ ಕೃಪೆ – ಅಮಿತ್ ಕಡಸೂರ್