ಉಡುಪಿ:ಸಿರಿ ತುಳುವ ಚಾವಡಿಯು ಮನೆ ಮನೆಗಳಲ್ಲಿ ಮುಂದಿಲ್ದ ಕೂಟ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿ ಜನರ ಮನದಾಳದಲ್ಲಿ ಬೇರು ಬಿಟ್ಟಿದ್ದಾರೆ ಎಂದು ತುಳು ಕೂಟದ ಉಡುಪಿಯ ಅಧ್ಯಕ್ಷ ವಿ.ಜಿ. ಶೆಟ್ಟಿ ಹೇಳಿದರು.
ಕೊಳಂಬೆ ಶಾಂತಿನಗರದಲ್ಲಿ ಉಡುಪಿ ಸಿರಿ ತುಳುವ ಚಾವಡಿ ಆಶ್ರಯದಲ್ಲಿ ನಡೆದ 75ನೇ ಮುಂದಿಲ್ದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎರ್ಮಾಳು ಜೂ. ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೆಳಾÂರು ಸಿರಿಯ ಬಗ್ಗೆ ಹಾಗೂ ಗುತ್ತಿನಾರ್ ಶಿಶಿರ್‌ಶೆಟ್ಟಿ ದೈವಾರಾಧನೆಯು ಹಿಂದಿಗಿಂತಲೂ ಪ್ರಸ್ತುತ ಆದ ಬದಲಾವಣೆಗಳ ಬಗ್ಗೆ ಮಾತನಾಡಿದರು.
ಡಾ| ವೈ.ಎನ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪದಲ್ಲಿ ಭಾಗವಹಿಸಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಬೇಕು ಎಂದವರು ತಿಳಿಸಿದರು.
43 ವರ್ಷದಿಂದ ಬಳೆ ಮಾರಾಟ ಮಾಡುತ್ತಿರುವ ವಿಮಜ ಜೋಗಿ ಅವರನ್ನು ಸಮ್ಮಾನಿಸಲಾಯಿತು. ತುಳುವ ಸಿರಿ ಮಾನಾದಿಗೆ ಎಂಬ ಗೌರವವನ್ನು ಶಶಿ ರೈ ಬಂಡಿಮಾರ್ ಮತ್ತು ಪಾಂಗಾಳ ಗರಡಿಯ ಜಯ ಅಮೀನ್ ಅವರಿಗೆ ನೀಡಲಾಯಿತು. ನೆಂಪುದ ಮಾನಾದಿಗೆ ಗೌರವವನ್ನು ಕೃಷ್ಣರಾವ್ ಕೊಡಂಚ ಅವರಿಗೆ ನೀಡಲಾಯಿತು.
ಕುದಿ ವಸಂತ್ ಶೆಟ್ಟಿ ಸ್ವಾಗತಿಸಿದರು, ಈಶ್ವರ್ ಚಿಟಾ³ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶಂಕರ್ ವಂದಿಸಿ
ದರು. ಶೋಭಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀಕಾಂತ ಶೆಟ್ಟಿ, ನಿಟ್ಟೂರು ಮಹಾಬಲ ಶೆಟ್ಟಿ, ಅಶೋಕ್ ಶೆಟ್ಟಿಗಾರ್, ಶ್ರೀಧರ್ ಕಲ್ಮಾಡಿ, ಸುಬ್ರಹ್ಮಣ್ಯ ಸಿರಿಯಾನ್, ವಿದ್ಯಾ ಶೆಟ್ಟಿ, ಚಿತ್ರಾ, ರಜನಿ, ಸರೋಜಾ ಶೇರಿಗಾರ್, ಶಾಂತಾ ಶೇರಿಗಾರ್, ಚಂದ್ರಾವತಿ ಮೊದಲಾದವರು ಉಪಸ್ಥಿತರಿದ್ದರು.