Advertisement

ಲಾಲ್‌ಬಾಗಿನಲ್ಲಿ ಸಿರಿಧಾನ್ಯಮೇಳ

09:39 AM May 06, 2019 | Hari Prasad |

“ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವ ಮಾತಿದೆ. ಅದರ ಅರ್ಥ, ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ಕಾರಣ ಅಂತ. ಯಾರಿಗೆ ಆಹಾರದ ಮಹತ್ವ ತಿಳಿದಿದೆಯೋ ಅವರಿಗೆ ಸಿರಿಧಾನ್ಯದ ಮಹತ್ವವೂ ಗೊತ್ತಿರುತ್ತದೆ. ಯಾಕಂದ್ರೆ, ಅನೇಕ ಆರೋಗ್ಯಕಾರಿ ಅಂಶಗಳನ್ನೊಳಗೊಂಡ ಸಿರಿವಂತ ಧಾನ್ಯ ಈ ಸಿರಿಧಾನ್ಯ. ನಿಮಗಿನ್ನೂ ಸಿರಿಧಾನ್ಯದ ಮಹತ್ವ ಗೊತ್ತಿಲ್ಲವಾದ್ರೆ, ಲಾಲ್‌ಬಾಗ್‌ನಲ್ಲಿ ನಡೆಯುತ್ತಿರೋ “ಸಿರಿಧಾನ್ಯ ವೈಭವ’ಕ್ಕೆ ಬನ್ನಿ.


“ಗ್ರಾಮೀಣ ಕುಟುಂಬ’ ಸಂಸ್ಥೆ ವತಿಯಿಂದ ಸಿರಿಧಾನ್ಯಗಳ ವೈಭವ ಹಾಗೂ ಸಾವಯವ ಆಹಾರ ಮೇಳ ನಡೆಯುತ್ತಿದೆ. ಡಾ. ಖಾದರ್‌ ಅವರಿಂದ ಸಿರಿಧಾನ್ಯ ಕುರಿತಾದ ಉಪನ್ಯಾಸ, ಅಡುಗೆಗಳ ಪರಿಚಯ, ರಿಯಾಯಿತಿ ದರದಲ್ಲಿ ಸಿರಿಧಾನ್ಯಗಳ ಮಾರಾಟ ನಡೆಯಲಿದೆ. ಅಷ್ಟೇ ಅಲ್ಲದೆ, ಸಾವಯವ ಉತ್ಪನ್ನಗಳು, ಖಾದಿ ವಸ್ತ್ರಗಳು, ಸಿರಿಧಾನ್ಯದ ಆಹಾರೋತ್ಪನ್ನಗಳ ಮಳಿಗೆಗಳೂ ಇರಲಿವೆ. ಮೇಳದಲ್ಲಿ ಭಾಗವಹಿಸಲು 9980651786ಗೆ ಕರೆ ಮಾಡಿ, ಹೆಸರು ನೋಂದಾಯಿಸಿ.

Advertisement

ಕಾರ್ಯಕ್ರಮಗಳು
ಮೇ 4 ಶನಿವಾರ ಬೆಳಗ್ಗೆ 10- ಸಿರಿಧಾನ್ಯ ಹಾಗೂ ಕಾಡು ಕೃಷಿ ಕುರಿತು ಉಚಿತ ತರಬೇತಿ
ಮೇ 4 ಶನಿವಾರ ಮಧ್ಯಾಹ್ನ 2.30- ಸಿರಿಧಾನ್ಯ ಅಡುಗೆ ಸ್ಪರ್ಧೆ ಹಾಗೂ ಉಚಿತ ಅಡುಗೆ ತರಬೇತಿ
ಮೇ 5 ಭಾನುವಾರ ಬೆಳಗ್ಗೆ 11- ಡಾ. ಖಾದರ್‌ರಿಂದ “ಸಿರಿಧಾನ್ಯಗಳ ಮಹತ್ವ’ ಕುರಿತು ಉಪನ್ಯಾಸ, ಸಂವಾದ

ಎಲ್ಲಿ?: ಡಾ. ಮರಿಗೌಡ ಸ್ಮಾರಕ ಭವನ, ಲಾಲ್‌ಬಾಗ್‌, ಡಬಲ್‌ ರೋಡ್‌ ಗೇಟ್‌
ಯಾವಾಗ?: ಮೇ 4- 5, ಬೆಳಗ್ಗೆ 7- ಸಂಜೆ 7

Advertisement

Udayavani is now on Telegram. Click here to join our channel and stay updated with the latest news.

Next