Advertisement

ಎಕರೆಗೆ 25 ಸಾವಿರ ನೀಡಲು ಸರ್ಕಾರಕ್ಕೆ ಒತ್ತಾಯ

05:44 PM Apr 27, 2020 | Naveen |

ಸಿರವಾರ: ಅಕಾಲಿಕ ಮಳೆ ಗಾಳಿಯಿಂದ ಭತ್ತ ನೆಲಕಚ್ಚಿದೆ. ಹಾಗಾಗಿ ಒಂದು ಎಕರೆಗೆ 20ರಿಂದ 25 ಸಾವಿರ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ತಾಲೂಕಿನ ಜಾಲಾಪುರ ಕ್ಯಾಂಪ್‌ ಸುತ್ತಲು ಮಳೆ-ಗಾಳಿಗೆ ನೆಲಕಚ್ಚಿದ ಭತ್ತ ವೀಕ್ಷಿಸಿ ಮಾತನಾಡಿ ಅವರು, ಸುಮಾರು 5 ವರ್ಷದಿಂದ ಈ ಭಾಗಕ್ಕೆ ಎರಡನೇ ಬೆಳೆಗೆ ನೀರು ಸಿಕ್ಕಿರಲಿಲ್ಲ. ಈ ವರ್ಷ ಎರಡನೇ ಬೆಳೆ ಬೆಳೆಯಲಾಗಿದೆ. ಆದರೆ ಅಕಾಲಿಕ ಗಾಳಿ ಮಳೆಯಿಂದ ನೆಲಕ್ಕಚ್ಚಿದೆ. ಈ ಭಾಗದಲ್ಲಿ ಸುಮಾರು 300ಕ್ಕೂ ಹೆಚ್ಚು ಎಕರೆ ಭತ್ತ ನಷ್ಟವಾಗಿದೆ ಎಂದು ಹೇಳಿದರು.

ನಾಗರಾಜ ಭೋಗಾವತಿ, ನಾಗರಾಜಗೌಡ, ವೈ. ಹಂಪನಗೌಡ, ಗೋಪಾಲ ನಾಯಕ , ದಾನಪ್ಪ ಸಿರವಾರ, ರೈತರಾದ ಶಿವಕುಮಾರ, ಆದಪ್ಪ ,ಪ್ರವೀಣ, ರಾಧಾಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next