Advertisement

ಕೊಚ್ಚಿ ಹೋದ ಬೆಳೆ: ಅನ್ನದಾತ ಕಂಗಾಲು

05:25 PM Sep 29, 2019 | Naveen |

ಸಿರುಗುಪ್ಪ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದ ರೈತರ ಹೊಲಗಳಿಗೆ ನೀರು ನುಗ್ಗಿ ನೂರಾರು ಎಕರೆ ಭತ್ತದ ಗದ್ದೆಗಳು ಮುಚ್ಚಿಹೋಗಿವೆ. ಮತ್ತೂಂದು ಕಡೆ ಹೊಲದ ಬದುಗಳು ಒಡೆದುಹೋಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿಹೋಗಿ ಹಳ್ಳಕೊಳ್ಳ ಸೇರಿದೆ. ಮಳೆ ನೀರಿನೊಂದಿಗೆ ಕೆಲ ಕಡೆ ಮರಳು ಭತ್ತದ ಗದ್ದೆಗಳಿಗೆ ಹರಿದು ಬಂದಿದ್ದರಿಂದ ಭತ್ತದ ಗದ್ದೆಯು ಮರಳಿನಲ್ಲಿ ಹೂತುಹೋಗಿದೆ. ರೈತರು ಗದ್ದೆಯಲ್ಲಿರುವ ಮರಳು ತೆಗೆದುಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ದೊಡ್ಡಹಳ್ಳ, ಕೆಂಚಿಹಳ್ಳ, ವೇದಾವತಿ ಹಗರಿ ನದಿಯ ದಂಡೆಯಲ್ಲಿ ನಾಟಿ ಮಾಡಿದ ಭತ್ತದ ಬೆಳೆಯು ಹೂತುಹೋಗಿ ರೈತರನ್ನು ಕಂಗಾಲಾಗಿಸಿದೆ. ರೈತರು ಹೊಲದಲ್ಲಿ ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಳೆನೀರಿನ ಪ್ರವಾಹದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ತಾಲೂಕು ಆಡಳಿತ ಬೆಳೆನಷ್ಟದ ಬಗ್ಗೆ ಶೀಘ್ರವಾಗಿ ಸರ್ವೆಕಾರ್ಯ ಮಾಡಿ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ತಾಲೂಕಿನ ಹಾಗಲೂರು ಗ್ರಾಮಕ್ಕೆ ಬಂದಿದ್ದ ಜಿಲ್ಲಾ ಜಂಟಿ ಕೃಷಿ ಉಪನಿರ್ದೇಶಕ ಚಂದ್ರಶೇಖರರನ್ನು ರೈತರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next