Advertisement
ಬಹುನಿರೀಕ್ಷಿತ ಸುರಂಗ ಮಾರ್ಗದ ಅಂತಿಮ ಯೋಜನಾ ವರದಿ ಈ ವರ್ಷದ ಜುಲೈಯಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಲಿದ್ದು, ಇದು ಅನುಮೋದನೆಯಾದ ಬಳಿಕ 2018ರ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಬಳಿಕ ಕಾಮಗಾರಿ ಹಂತಗಳು ಪ್ರಾರಂಭವಾಗಲಿವೆ.
Related Articles
ಮಾಹಿತಿ ನೀಡಿದ್ದಾರೆ.
Advertisement
ಪರಿಸರದ ಮೇಲಿನ ದೌರ್ಜನ್ಯಕ್ಕೆ ಯಾರು ಹೊಣೆ?“ಈಗಾಗಲೇ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಂಗಳೂರು- ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಗುಂಡ್ಯದಲ್ಲಿ ಜಲವಿದ್ಯುತ್ ಸ್ಥಾವರ, ಗುಂಡ್ಯ-ಬಿ.ಸಿ. ರೋಡ್ ಹೆದ್ದಾರಿಗಾಗಿ ಮರಗಳ ಕಡಿತ ಹೀಗೆ ವಿವಿಧ ರೀತಿಯಲ್ಲಿ ಪಶ್ಚಿಮ ಘಟ್ಟಕ್ಕೆ ಹೊಡೆತ ಬಿದ್ದಿದ್ದು, ಇದೀಗ ಎತ್ತಿನಹೊಳೆಯೆಂಬ ಮಹಾ ಯೋಜನೆ ಪಶ್ಚಿಮಘಟ್ಟವನ್ನು ಬರಿದು ಮಾಡುತ್ತಿದೆ. ಇದರ ಮಧ್ಯೆಯೇ ಇದೀಗ ಹೆದ್ದಾರಿಗಾಗಿ ಸುರಂಗ ತೋಡಲು ಸರಕಾರ ಹೊರಟಿದೆ. ಅಭಿವೃದ್ಧಿ ಬೇಕು ಮತ್ತು ಅಗತ್ಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದಿನಕ್ಕೊಂದು ರೀತಿಯಲ್ಲಿ ಪೆಟ್ಟು ತಿನ್ನುತ್ತಿರುವ ಪಶ್ಚಿಮಘಟ್ಟದ ಬಗೆಗಿನ ಕಾಳಜಿ ವಹಿಸಬೇಕಾದವರು ಯಾರು ಎಂಬುದು ಪ್ರಶ್ನೆ. ಅಲ್ಲಿ ಪರಿಸರದ ಮೇಲಾಗುತ್ತಿರುವ ದೌರ್ಜನ್ಯವನ್ನು ಯಾರೂ ಗಮನಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿ’ ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ. ಶಿರಾಡಿ 2ನೇ ಹಂತಕ್ಕೆ ಮರು ಟೆಂಡರ್
ಶಿರಾಡಿ ಘಾಟಿಯ 2ನೇ ಹಂತದ ಕಾಮಗಾರಿಗೆ ರಿಜಿಡ್ ಪೇವ್‌ಮೆಂಟ್ ಕಾರ್ಯವನ್ನು ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರರು ರಸ್ತೆಯನ್ನು ಹಸ್ತಾಂತರಿಸಿರುವ 2015ರ ಡಿ. 23ರಿಂದ 6 ತಿಂಗಳೊಳಗೆ (22-6-2016ರಂದು) ಕಾಮಗಾರಿಯ ಶೇ. 10ರಷ್ಟು ಅಂದರೆ 9.02 ಕೋ.ರೂ. ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗಿತ್ತು. ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಈ ವರ್ಷದ ಜ.3ರಂದೂ ಸಹ ಮೊದಲ ಆರ್ಥಿಕ ಪ್ರಗತಿಯನ್ನು ಸಾಧಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಗುತ್ತಿಗೆ ಕರಾರನ್ನು ರಾ.ಹೆ.ಯ ಮುಖ್ಯ ಎಂಜಿನಿಯರ್ ಅವರು ಜ.4ರಂದು ರದ್ದುಗೊಳಿಸಿದ್ದಾರೆ. ಹೀಗಾಗಿ ಈ ಕಾಮಗಾರಿಯ ಮರು ಟೆಂಡರ್ ಕರೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರಕಾರ ಈಗಾಗಲೇ ತಿಳಿಸಿದೆ. 14 ಮೀ. ಅಗಲ-7.5 ಮೀ. ಎತ್ತರದ ಸುರಂಗ
ರಾಜ್ಯ ಲೋಕೋಪಯೋಗಿ ಸಚಿವ ಡಾ| ಎಚ್.ಸಿ. ಮಹಾದೇವಪ್ಪ ಈಗಾಗಲೇ ತಿಳಿಸಿದಂತೆ, ಶಿರಾಡಿಯ ಹೆಗ್ಗದ್ದೆಯಿಂದ ಅಡ್ಡಹೊಳೆಯ ಸೈಂಟ್ ಜೋಸೆಫ್ ಚರ್ಚ್ ವರೆಗೆ ನಿರ್ಮಿಸುವ ಈ ಸುರಂಗ ರಸ್ತೆಯಲ್ಲಿ 7 ಸುರಂಗಗಳು ಬರಲಿವೆ. 12.41 ಕಿ.ಮೀ. ಒಟ್ಟು ಉದ್ದದ ಸುರಂಗದಲ್ಲಿ 2.7 ಕಿ.ಮೀ. ಅತೀ ಉದ್ದದ ಸುರಂಗವಾಗಲಿದೆ. ಸುರಂಗವು 14 ಮೀ. ಅಗಲ ಮತ್ತು 7.5 ಮೀ. ಎತ್ತರ ಇರಲಿದೆ. 6.72 ಕಿ.ಮೀ.ನಲ್ಲಿ ಒಟ್ಟು 10 ಸೇತುವೆಗಳು ನಿರ್ಮಾಣಗೊಳ್ಳಲಿವೆ. ಸುಮಾರು 77 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಸಮಗ್ರ ಸಮೀಕ್ಷೆ ಹಾಗೂ ಭೂತಾಂತ್ರಿಕ ತನಿಖಾ ವರದಿ ಗಮನಿಸಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಅನುಮೋದನೆ ನೀಡಲಿದೆ. ಯೋಜನೆ ಪೂರ್ಣಗೊಳ್ಳಲು ಹೆಚ್ಚಾ ಕಡಿಮೆ 4 ವರ್ಷ ಅವಧಿ ಬೇಕಾಗಬಹುದು ಎಂದು ಹೇಳಿದ್ದಾರೆ. -ದಿನೇಶ್ ಇರಾ