Advertisement
ನಮ್ಮ ಗುರಿ, ನಮ್ಮ ವಿಧಿ, ಮನುಷ್ಯನ ಕೈಯಲ್ಲಿರುವ ಸಾಧನ’’ ಎಂದು ಬಲವಾಗಿ ಪ್ರತಿಪಾದಿಸಿ ನಂಬಿ ನಡೆದ ಮಹಾನ್ ಸಾಧಕ ವ್ಯಕ್ತಿ ಮೋಕ್ಷ ಗುಂಡಂ ವಿಶ್ವೇಶ್ವರಯ್ಯನವರು. ಇಂತಹ ಮಹಾನ್ ಸಾಧಕ ಪುರುಷನ ಬದುಕು, ಸಾಧನೆ, ಚಿಂತನೆಗಳನ್ನು ಮನನ ಮಾಡಿ ಮುನ್ನಡೆಯುವ ಸುದಿನವೇ ಎಂಜಿನಿಯರ್ ದಿನಾಚರಣೆ ಅಂದರೂ ತಪ್ಪಾಗಲಾರದು.
Related Articles
Advertisement
* ಸರ್.ಎಂ.ವಿ. ಅವರ ಕೊಡುಗೆ ಚಿಂತನೆ, ಪ್ರಾಮಾಣಿಕತನ ಎಂದಿಗಿಂತ ಇಂದು ಹೆಚ್ಚು ಪ್ರಸ್ತುತತೆ ಪಡೆದುಕೊಳ್ಳಬೇಕಾಗಿದೆ. ಬೆಂಗಳೂರಿನಂತಹ ಮಹಾನಗರ ಪ್ರದೇಶಗಳಲ್ಲಿ ಇಂದಿಗೂ ಕುಡಿಯುವ ನೀರಿಗೆ ಹಾಹಾಕಾರವಿದೆ. ಮಾತ್ರವಲ್ಲ ಮಳೆ ಬಂತು ಅಂದರೆ ಇಡೀ ನಗರ ಜàವನವೇ ಅಸ್ತವೆಸ್ತವಾಗುವ ಪರಿಸ್ಥಿತಿ.ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ನಾವೇಕೆ ಸೋತಿದ್ದೇವೆ ಅನ್ನುವುದನ್ನು ನಮ್ಮ ಘನ ಸರಕಾರಗಳು ಇಂಜಿನಿಯರ್ಗಳು ಮರು ಮನನ ಮಾಡಬೇಕಾಗಿದೆ. ಅಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂದಿಗಿಂತ ಇಂದು ಭಾರೀ ಮುಂದಿದ್ದೇವೆ. ಆದರೆ ಪ್ರಾಮಾಣಿಕತನದ ಮಾನವಿಯತೆಯ ದುಡಿಮೆಯಲ್ಲಿ ಭಾರೀ ಹಿಂದಿದ್ದೇವೆ ಅನ್ನುವುದನ್ನು ಸಾಬೀತುಪಡಿಸುವಂತಿದೆ ಇಂದಿನ ನಮ್ಮ ಯೋಜನಾ ಕಾರ್ಯಗಳು. * 1909ರಲ್ಲಿ ಸರ್. ಎಂ.ವಿ. ಅವರು ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ಕೆಲಸಕ್ಕೆ ನಿಯುಕ್ತಿಗೊಂಡರು. ಅಂದು ಅವರ ಇಲಾಖೆಗೆ ನೇಮಕಗೊಂಡಿದ್ದ ಅರ್ಹತೆ ಹೇಗಿತ್ತು ಅಂದರೆ ‘ಹಿರಿಯ ಅಧಿಕಾರಿಗಳ ಸಂಬಂಧಿಕರೇ, ಅವರ ಇಲಾಖೆಗೆ ನೇಮಕಗೊಂಡಿದ್ದರು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸರ್.ಎಂ.ವಿ. ಅವರು ಈ ನೇಮಕಾತಿ ಪಟ್ಟಿಯನ್ನು ತಿರಸ್ಕರಿಸಿ, ತಮ್ಮ ಇಲಾಖೆಗೆ ಕೇವಲ ಅರ್ಹತೆ ಮತ್ತು ವಿದ್ಯಾರ್ಹತೆಯ ಮೇಲೆ ನೇಮಕ ಮಾಡಿ ತಮ್ಮ ದಕ್ಷತೆ, ಪ್ರಾಮಾಣಿಕತನಕ್ಕೆ ಸರ್ ಎಂ.ವಿ. ಅವರು ಸಾಕ್ಷಿಯಾದರು.’ ಅಂದರೆ ಇಂತಹ ನಡೆ-ನಿರ್ಧಾರ ಇಂದಿನ ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಇದೆಯಾ ಅನ್ನುವುದನ್ನು ನಾವು ಪ್ರತಿಯೊಬ್ಬರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. * ಭಾರತದ ಭಾಗ್ಯಶಿಲ್ಪಿ ಸರ್.ಎಂ.ವಿ. ಅವರದು ಸಾಧನೆಯ ಮಹಾಪೂರವೂ ಹೌದು. ದಿವಾನರಾಗಿದ್ದ ಕಾಲದಲ್ಲಿ ಅವರ ಮುತುವರ್ಜಿಯಲ್ಲಿ ಸ್ಥಾಪಿತವಾದ ಪ್ರತಿಯೊಂದು ಸಂಸ್ಥೆ , ಉದ್ಯಮ ಇಂದು ಬೆಳೆದು ಹೆಮ್ಮರವಾಗಿ ನಿಂತಿವೆ. ಇದು ಈ ನಾಡಿನ ಅಭಿವೃದ್ಧಿಯ ಹೆಗ್ಗುರುತು ಎಂದೇ ಗುರುತಿಸಲಾಗುತ್ತಿದೆ.
ಉದಾ.: ಶಿವನ ಸಮುದ್ರ ವಿದ್ಯುತ್ ಉತ್ಪಾದನಾ ಯೋಜನೆ, ಹೆಬ್ಟಾಳದ ಕೃಷಿ ಶಾಲೆ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತು, ರೇಷ್ಮೆ , ಸಾಬೂನು, ಗಂಧದ ಎಣ್ಣೆ , ಚರ್ಮೋದ್ಯಮ…ಮುಂತಾದ ಉದ್ಯಮಗಳಿಗೆ ಅಡಿಪಾಯ ಹಾಕಿದ ಕೀರ್ತಿ ಅವರದು. ಭದ್ರಾವತಿ ಉಕ್ಕಿನ ಕಾರ್ಖಾನೆ, ಕೃಷ್ಣರಾಜ ಸಾಗರ ಜಲಾಶಯಾಗಳು ಮೇರು ಸದೃಶ್ಯದ ಕಾರ್ಯ ಯೋಜನೆಗಳೆಂದು ಬಿಂಬಿಸಲ್ಪಟ್ಟಿವೆ. ಈ ಎಲ್ಲದರ ಫಲಾನುಭವಿಗಳಾದ ನಾವಿಂದು ಸರ್. ಎಂ.ವಿ. ಅವರನ್ನು ಸ್ಮರಿಸಲೇ ಬೇಕಾದ ದಿನವೂ ಹೌದು. * ಈ ಎಲ್ಲಾ ಸಾಧನೆಗಳ ಕೃತಶಕ್ತಿ, ಇಚ್ಛಾಶಕ್ತಿಯ ಮಹಾನ್ ಸಾಧಕ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರನ್ನು ಈ ದೇಶ ಕಂಡ ಭಾಗ್ಯದ ಶಿಲ್ಪಿ ಮಾತ್ರವಲ್ಲ, ಈ ರಾಷ್ಟ್ರದ ಮಹಾನ್ ಮೂವರು ಶ್ರೇಷ್ಠ ವ್ಯಕ್ತಿಗಳಾದ ಗಾಂಧೀಜಿ, ರವೀಂದ್ರನಾಥ ಠಾಗೂರ್, ಸರ್.ಎಂ.ವಿ. ಅವರನ್ನು ಸರಿಸಮಾನವಾದ ಸ್ಥಾನ ಮಾನದಲ್ಲಿ ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು. ಇಂದು ಅವರ ಹುಟ್ಟು ದಿನವನ್ನೂ ನಾವು ಇಂಜಿನಿಯರ್ ದಿನಾಚರಣೆಯಾಗಿ
ಆಚರಿಸುವುದರ ಜೊತೆಗೆ ಅವರು ಸಾಗಿ ಬಂದ ರೀತಿಯಲ್ಲಿ ನಮ್ಮ ಚಿಂತನೆ-ನಡೆನುಡಿ, ಕಾರ್ಯಗಳನ್ನು ಪಾಲಿಸುವುದು ನಿಜವಾದ ರೀತಿಯಲ್ಲಿ ಸರ್. ಎಂ.ವಿ. ಅವರಿಗೆ ಸಮರ್ಪಿಸುವ ನುಡಿನಮನವೂ ಹೌದು. ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ , ಉಡುಪಿ
ನಿರೂಪಣೆ :
ಎಸ್.ಜಿ ನಾಯ್ಕ ಸಿದ್ದಾಪುರ