Advertisement

ಭಾರತಕ್ಕೆ ರಶ್ಯ ಶಸ್ತ್ರಾಸ್ತ್ರ ರಫ್ತು ಗಮನಾರ್ಹ ಕುಸಿತ: ಸಿಪ್ರಿ ವರದಿ

06:00 AM Mar 11, 2019 | udayavani editorial |

ವಾಷಿಂಗ್ಟನ್‌ : 2009-2013ರ ಅವಧಿಯಲ್ಲಿದ್ದ ಭಾರತಕ್ಕೆ ರಶ್ಯದ ಶಸ್ತ್ರಾಸ್ತ್ರ ರಫ್ತು ಪ್ರಮಾಣ 2014-18ರ ಅವಧಿಯಲ್ಲಿ ಗಮನಾರ್ಹವಾಗಿ ಕುಸಿದಿರುವುದಾಗಿ ಹೊಸ ವರದಿಯೊಂದು ತಿಳಿಸಿದೆ.

Advertisement

2009-2013ರ ಅವಧಿಯಲ್ಲಿ ಭಾರದ ರಶ್ಯದಿಂದ ಶೇ.76ರಷ್ಟು ಮಾಡಿಕೊಂಡಿದ್ದ ಶಸ್ತ್ರಾಸ್ತ್ರ ಆಮದು, 2014-2018ರ ಅವಧಿಯಲ್ಲಿ ಶೇ.58ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

ವಿದೇಶೀ ಶಸ್ತ್ರಾಸ್ತ್ರಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಯತ್ನದ ಫ‌ಲವಾಗಿ 2009-2013 ಮತ್ತು 2014-2018ರಲ್ಲಿನ ರಶ್ಯ ಶಸ್ತ್ರಾಸ್ತ್ರ ಆಮದು ಶೇ. 24ರಷ್ಟು ಕಡಿಮೆಯಾಗಿರುವುದಾಗಿ ವರದಿ ತಿಳಿಸಿದೆ. 

ಟ್ರೆಂಡ್ಸ್‌ ಇನ್‌ ಇಂಟರ್‌ನ್ಯಾಶನಲ್‌ ಆಮ್ಸ್‌ì ಟ್ರಾನ್ಸ್‌ಫ‌ರ್ 2018 ಎಂಬ ಶೀರ್ಷಿಕೆಯ ವರದಿಯನ್ನು ಸ್ಟಾಕ್‌ಹೋಮ್‌ ಇಂಟರ್‌ನ್ಯಾಶನಲ್‌ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಬಿಡುಗಡೆ ಮಾಡಿದೆ. 

ರಶ್ಯಕ್ಕೆ 2001ರಲ್ಲಿ ನೀಡಲಾಗಿದ್ದ ಯುದ್ಧ ವಿಮಾನ ಪೂರೈಕೆಗಳ ಆದೇಶ ಮತ್ತು 2008ರಲ್ಲಿ ಫ್ರಾನ್‌ ಗೆ ನೀಡಲಾಗಿದ್ದ ಜಲಾಂತರ್ಗಾಮಿ ಪೂರೈಕೆ ಆದೇಶಕ್ಕೆ ಪ್ರತಿಯಾಗಿ ಆ ದೇಶಗಳಿಂದ ಪೂರೈಕೆಯ ಅತ್ಯಂತ ವಿಳಂಬಿತವಾಗಿರುವುದು ಕೂಡ ಅವುಗಳ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಲು ಕಾರಣವೆಂದು ವರದಿ ತಿಳಿಸಿದೆ. 

Advertisement

ಹಾಗಿದ್ದರೂ 2014-18ರ ಅವಧಿಯಲ್ಲಿ ಭಾರತದವು ವಿಶ್ವದ ಎರಡನೇ ಅತೀ ದೊಡ್ಡ ಪ್ರಮುಖ ಶಸ್ತ್ರಾಸ್ತ್ರ ಆಮದು ದೇಶವಾಗಿದೆ. ಇದು ವಿಶ್ವದ ಶೇ.9.5ರ ಪಾಲು ಎನ್ನವುದು ಗಮನಾರ್ಹವಾಗಿದೆ ಎಂದು ವರದಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next