ದಾಂಡೇಲಿ : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಚಾಪನ್ನ ಮೂಡಿಸುತ್ತಿರುವ ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣ ಮಾತ್ರ ಸೋರುವ ಮೂಲಕ ಎಲ್ಲರ ಗಮನ ಸೆಳೆಯತೊಡಗಿದೆ.
ಸಾರಿಗೆ ಬಸ್ ನಿಲ್ದಾಣದ ಒಳಗಡೆ ಛತ್ರಿ ಬಿಡಿಸಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಚಾರಿ ನಿಯಂತ್ರಕರ ಕೊಠಡಿಯಲ್ಲಂತೂ ನೀರು ತುಂಬಿಕೊಂಡಿರುತ್ತದೆ. ನಿಲ್ದಾಣದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಂತೂ ನೀರು ನಿಂತಿರುವುದರಿಂದ ವಿಶ್ರಾಂತಿ ಮಾಡಲು ಹೋದವರಿಗೆ ವಾಂತಿ ಬರುವಂತಹ ಸ್ಥಿತಿಯಿದೆ.
ಬಸ್ ನಿಲ್ದಾಣದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಪ್ರಯಾಣಿಕರು ಮಾತ್ರವಲ್ಲದೆ ಸಿಬ್ಬಂದಿಗಳು ಕೂಡ ಭಯಪಟ್ಟುಕೊಂಡೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿದೆ.
ಈ ನಿಟ್ಟಿನಲ್ಲಿ ಸೋರುತ್ತಿರುವ ಈ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಿ ಹೊಸ ಕಾಯಕಲ್ಪವನ್ನು ನೀಡಬೇಕೆಂದು ಸಾರ್ವಜನಿಕರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.
ಇದನ್ನೂ ಓದಿ: Panaji: ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ